ಕರ್ನಾಟಕ

karnataka

ETV Bharat / state

ಸಾಂದರ್ಭಿಕ ರಜೆ 15ರಿಂದ 10ಕ್ಕೆ ಇಳಿಕೆ: ಡಿಜಿ ಪ್ರವೀಣ್ ಸೂದ್ ಆದೇಶ - ಪೊಲೀಸರ ಸಾಂದರ್ಭಿಕ ರಜೆ ದಿನಗಳು ಇಳಿಕೆ

ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುವ ಸಿಬ್ಬಂದಿಗೆ 15 ಸಾಂದರ್ಭಿಕ ರಜೆಗಳ ಬದಲು 10 ರಜೆ ನಿಗದಿಪಡಿಸಲಾಗಿದೆ. ಕಾರ್ಯಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಎಲ್ಲಾ ಭಾನುವಾರ 2ನೇ ಹಾಗೂ 4ನೇ ಶನಿವಾರದ ಸಾರ್ವತ್ರಿಕ ರಜೆ ಸೌಲಭ್ಯ ಒದಗಿಸುವಂತೆ ರಾಜ್ಯ ಪೊಲೀಸ್​ ಇಲಾಖೆಯ ಮಹಾನಿರ್ದೇಶಕ ಪ್ರವೀಣ್​ ಸೂದ್​ ಆದೇಶ ನೀಡಿದ್ದಾರೆ.

occasional-leave-reduced-from-15-to-10
ಡಿಜಿ ಪ್ರವೀಣ್ ಸೂದ್

By

Published : Aug 12, 2021, 9:04 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸಲು ಹಾಗೂ ರಜಾ ಸೌಲಭ್ಯವನ್ನು ಗರಿಷ್ಠ ಮಟ್ಟದಲ್ಲಿ ನೀಡುವ ಸಲುವಾಗಿ ಪೊಲೀಸ್ ಕಾನ್ ಸ್ಟೇಬಲ್ ಹಾಗೂ ಹೆಡ್ ಕಾನ್ ಸ್ಟೇಬಲ್ ಗಳಿಗೆ ವಾರದ ರಜೆ ಪಡೆಯಲು ಅರ್ಹರಾಗಿದ್ದು, ರಜೆ ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವಾರದ ರಜೆಯ ಭತ್ಯೆ ಮಂಜೂರು ಮಾಡಲು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್ ಹೊಸ ಆದೇಶ ಹೊರಡಿಸಿದ್ದಾರೆ.

ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುವ ಸಿಬ್ಬಂದಿಗೆ 15 ಸಾಂದರ್ಭಿಕ ರಜೆಗಳ ಬದಲು 10 ರಜೆ ನಿಗದಿಪಡಿಸಲಾಗಿದೆ. ಕಾರ್ಯಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಎಲ್ಲ ಭಾನುವಾರ 2ನೇ ಹಾಗೂ 4ನೇ ಶನಿವಾರದ ಸಾರ್ವತ್ರಿಕ ರಜೆ ಸೌಲಭ್ಯ ಒದಗಿಸುವಂತೆ ಆದೇಶ ನೀಡಿದ್ದಾರೆ.

ಕಾರ್ಯಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸಿಕ 6 ಹಾಗೂ 7 ರಜೆ (ತಿಂಗಳಲ್ಲಿ 5 ಭಾನುವಾರವಿದ್ದರೆ) ದೈನಂದಿನ ಕಾರ್ಯಕಲಾಪಗಳಿಗೆ ಅಡ್ಡಿಯಾಗಲಿದ್ದು, ಆದರಿಂದ ಜಿಲ್ಲಾ ಪೊಲೀಸ್ ಕಮೀಷನರೇಟ್, ಕೆಎಸ್ಆರ್ ಪಿ ಮತ್ತು ಕೆಎಸ್ ಐಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸಿಕ 2 ವಾರದ ರಜಾ ಭತ್ಯೆ ಪಡೆದುಕೊಳ್ಳಲು ಅನುಮತಿಸಲಾಗಿದೆ.

2019ರಲ್ಲಿ ಪೊಲೀಸರಿಗೆ ಇದ್ದ 15 ಸಾಂದರ್ಭಿಕ ರಜೆಯಿಂದ 10ಕ್ಕೆ ಇಳಿಸಿತ್ತು. ಪೊಲೀಸ್ ಇಲಾಖೆ ಜೊತೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಮತ್ತೆ ಇಳಿಸಲಾಗಿದ್ದ 10 ಸಾಂದರ್ಭಿಕ ರಜೆಯನ್ನು 15ಕ್ಕೆ ಏರಿಸಿತ್ತು.

ಆದೇಶದಲ್ಲಿ ಏನಿದೆ ?

  • ಪೊಲೀಸ್ ಕಾನ್ಸ್​ಟೇಬಲ್​ ಹಾಗೂ ಹೆಡ್ ಕಾನ್ಸ್​ಟೇಬಲ್​ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವಾರದ ಸಾರ್ವತ್ರಿಕ ರಜೆ ಪಡೆಯಲು ಅರ್ಹರಾಗಿದ್ದು, ವಾರದ ರಜೆ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ವಾರದ ರಜಾ ಭತ್ಯೆ ಮಂಜೂರು ಮಾಡಲಾಗಿದೆ.
  • 2019 ರಿಂದ ಭಾನುವಾರ ಮತ್ತು ಎರಡನೇ ಶನಿವಾರ ಸಾರ್ವತ್ರಿಕ ರಜೆಯ ಜೊತೆಗೆ ನಾಲ್ಕನೇ ಶನಿವಾರ ಸಹ ಸಾರ್ವತ್ರಿಕ ರಜೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಸಾಂದರ್ಭಿಕ ರಜೆಯನ್ನು 15 ದಿನಗಳ ಬದಲಿಗೆ 10 ದಿನಗಳಿಗೆ ಕಡಿತಗೊಳಿಸಲಾಗಿದೆ.
  • ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳ ಸಾರ್ವತ್ರಿಕ ರಜೆಯನ್ನು ಅನುಭವಿಸುವ ಸಿಬ್ಬಂದಿ 10 ದಿನ ಸಾಂದರ್ಭಿಕ ರಜೆ ಹಾಗೂ 2 ದಿನಗಳ ನಿರ್ಬಂಧಿತ ರಜೆ ಪಡೆಯಲು ಅರ್ಹರಾಗಿರಲಿದ್ದಾರೆ.

ABOUT THE AUTHOR

...view details