ಬೆಂಗಳೂರು:ಎರಡು ತಿಂಗಳಿನಿಂದ ಪ್ರಕಟಗೊಂಡಿರದ ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯಸ್ಥಿಕೆಯಿಂದ ಕೇವಲ 24 ಗಂಟೆಗಳಲ್ಲಿ ಪ್ರಕಟಗೊಂಡಿದೆ.
ಸಚಿವರ ಮಧ್ಯಸ್ಥಿಕೆ: 24 ಗಂಟೆಗಳಲ್ಲೇ ಪ್ರಕಟವಾಯ್ತು ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶ - ursing student results published in a single day
ಎರಡು ತಿಂಗಳಿನಿಂದ ಪ್ರಕಟಗೊಂಡಿರದ ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯಸ್ಥಿಕೆಯಿಂದ ಕೇವಲ 24 ಗಂಟೆಗಳಲ್ಲಿ ಪ್ರಕಟಗೊಂಡಿದೆ.

ನರ್ಸಿಂಗ್ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಫಲಿತಾಂಶ ಪ್ರಕಟವಾಗದ ಹಿನ್ನೆಲೆ ಸಚಿವ ಡಾ.ಸುಧಾಕರ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ನಿನ್ನೆಯಷ್ಟೆ ಅಹವಾಲು ಸಲ್ಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಫಲಿತಾಂಶ ಪ್ರಕಟಿಸಲು ವಿಶ್ವ ವಿದ್ಯಾಲಯಗಳಿಗೆ ಒಂದು ವಾರದ ಗಡುವು ನೀಡಿದ್ದರು. ಆದರೆ, ಕೇವಲ 24 ಗಂಟೆಗಳಲ್ಲೇ ಫಲಿತಾಂಶ ಪ್ರಕಟಗೊಂಡಿದೆ.
ಸಚಿವರಿಗೆ ಅಹವಾಲು ಸಲ್ಲಿಸಿದ ವಿದ್ಯಾರ್ಥಿಗಳು
ಫಲಿತಾಂಶ ಪ್ರಕಟಗೊಂಡಿರದ ಕಾರಣ ವಿದ್ಯಾರ್ಥಿ ವೇತನ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಸದ್ಯ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿದಂತಾಗಿದ್ದು, ಅವರೆಲ್ಲ ಖುಷಿಯಾಗಿದ್ದಾರೆ.