ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಎನ್​​​ಎಸ್​ಯುಐ ಪ್ರತಿಭಟನೆ - Education Minister Suresh Kumar

ಕೊರೊನಾ ನಡುವೆ ಶಾಲೆ ಪುನಾರಂಭ ಹಾಗೂ ಆನ್​​ಲೈನ್​​ ತರಗತಿ ಕುರಿತಂತೆ ಎನ್​ಎಸ್​ಯಐ ಸಂಘಟನೆಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಅಲ್ಲದೆ ಸರ್ಕಾರದ ಹಲವು ನೀತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

NSUI protests against state government policies
ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಎನ್​​​ಎಸ್​ಯುಐ ಪ್ರತಿಭಟನೆ

By

Published : Jun 6, 2020, 11:47 PM IST

ಬೆಂಗಳೂರ: ರಾಜ್ಯ ಸರ್ಕಾರದ ವಿರುದ್ಧ ಎನ್​​​ಎಸ್​ಯುಐ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಎನ್​​​ಎಸ್​ಯುಐ ಪ್ರತಿಭಟನೆ

ಕಾಲೇಜುಗಳು ವಿದ್ಯಾರ್ಥಿಗಳು ಶೋಷಣೆಗೊಳಪಟ್ಟಿದ್ದು, ಎಂಜಿನಿಯರ್, ಪದವಿ ವಿದ್ಯಾರ್ಥಿಗಳ ಮೇಲೆ ಕಿರುಕುಳ ನಡೆಯುತ್ತಿದೆ. ತಮ್ಮ ಶುಲ್ಕ ಸಂಗ್ರಹ ಮಾಡುವುದಕ್ಕೆ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಕ್ ಲಾಗ್ ಉಳಿಸಿಕೊಳ್ಳಿ ಅಂತ ವಿದ್ಯಾರ್ಥಿಗಳಿಗೆ ಹೇಳುತ್ತಾರೆ. 6 ತಿಂಗಳು ಸಿಲ್​ಬಸ್ ಮುಂದಕ್ಕೆ ಹಾಕಲಿ, 14 ಸಿಲ್​ಬಸ್ ಆನ್​ಲೈನ್​ನಲ್ಲಿ ಮುಗಿಸುವುದು ಕಷ್ಟ. ಸಿಲ್​​ಬಸ್ ಕಂಪ್ಲೀಟ್ ಆಗುವವರೆಗೆ ಎಕ್ಸಾಂ ಬೇಡ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಗ್ರಾಮೀಣ ಭಾಗದಲ್ಲಿ ಎಲ್ಲರೂ ಲ್ಯಾಪ್ ಟಾಪ್ ಇಟ್ಕೊಳ್ಳೋಕೆ ಆಗುತ್ತಾ..? ಕೆಲವರ ಬಳಿ ಮೊಬೈಲ್​ಗಳೇ ಇಲ್ಲ. ಮರ ಹತ್ತಿ, ಬೆಟ್ಟ ಹತ್ತಿ ನೆಟ್​ವರ್ಕ್​ಗೆ ಪರದಾಡ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಆನ್​ಲೈನ್ ಕ್ಲಾಸ್ ಸಾಧ್ಯವೇ? ಎಂದು ವಿದ್ಯಾರ್ಥಿ ನಾಯಕರು ಪ್ರಶ್ನಿಸಿದರು. ಆನ್​ಲೈನ್ ಪರೀಕ್ಷೆ ಕೂಡ ಸಾಧ್ಯವಿಲ್ಲ. ಕೂಡಲೇ ಸರ್ಕಾರ ಶಿಕ್ಷಣ ತಜ್ಞರ ಸಭೆ ಕರೆದು ಚರ್ಚಿಸಲಿ. ನಂತರ ಉತ್ತಮ ನಿರ್ಧಾರ ತೆಗೆದುಕೊಳ್ಳಲಿ. ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎನ್​ಎಸ್​ಯುಐ ಘಟಕದಿಂದ ಸರ್ಕಾರಕ್ಕೆ ಆಗ್ರಹಿಸಲಾಗಿದೆ.

ABOUT THE AUTHOR

...view details