ಕರ್ನಾಟಕ

karnataka

ETV Bharat / state

ಆನ್​ಲೈನ್​ ಪರೀಕ್ಷೆಗೆ ಮುಂದಾದ ಕ್ರೈಸ್ಟ್ ಯೂನಿವರ್ಸಿಟಿ: ಎನ್​ಎಸ್​​ಯುಐ ಪ್ರತಿಭಟನೆ

ಡೈರಿ ವೃತ್ತ ಸಮೀಪ ಇರುವ ಕ್ರೈಸ್ಟ್ ವಿಶ್ವವಿದ್ಯಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಆನ್​​ಲೈನ್ ಪರೀಕ್ಷೆ ನಡೆಸದಂತೆ ಆಗ್ರಹಿಸಿದರು. ಒಂದು ದಿನ ಕ್ಲಾಸ್ ನಡೆದಿಲ್ಲ. ಆನ್​​ಲೈನ್ ಪಾಠ ನಮಗೆ ಅರ್ಥ ಆಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಒತ್ತಾಯಿಸಿದರು.

NSUI proetst
ನ್​ಎಸ್​​ಯುಐ ಪ್ರತಿಭಟನೆ

By

Published : Jul 13, 2020, 5:44 PM IST

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಗಾಳಿಗೆ ತೂರಿ ಕ್ರೈಸ್ಟ್ ಯೂನಿವರ್ಸಿಟಿ ಡಿಗ್ರಿ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್​ಲೈನ್ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಎನ್ಎಸ್​​​ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಡೈರಿ ವೃತ್ತ ಸಮೀಪ ಇರುವ ಕ್ರೈಸ್ಟ್ ವಿಶ್ವವಿದ್ಯಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಆನ್​​ಲೈನ್ ಪರೀಕ್ಷೆ ನಡೆಸದಂತೆ ಆಗ್ರಹಿಸಿದರು. ಒಂದು ದಿನ ಕ್ಲಾಸ್ ನಡೆದಿಲ್ಲ. ಆನ್​​ಲೈನ್ ಪಾಠ ನಮಗೆ ಅರ್ಥ ಆಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಒತ್ತಾಯಿಸಿದರು.

ನ್​ಎಸ್​​ಯುಐ ಪ್ರತಿಭಟನೆ

ನಾಳೆ ರಾತ್ರಿಯಿಂದ ಲಾಕ್​ಡೌನ್ ಇರಲಿದೆ. ಇದರಿಂದ ಓಡಾಟ ಕಷ್ಟ. ಹಾಗಾಗಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿ ಸ್ವೀಕರಿಸದ ಯೂನಿವರ್ಸಿಟಿ ಕುಲಪತಿಗಳ ವಿರುದ್ಧವೂ ಘೋಷಣೆ ಕೂಗಿದರು. ವಿವಿ ಕ್ಯಾಂಪಸ್ ಗೇಟ್​ಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು.

ABOUT THE AUTHOR

...view details