ಬೆಂಗಳೂರು: ರಾಜ್ಯ ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕೆರಳಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಬಿಜೆಪಿಗೆ 24 ಗಂಟೆಗಳ ಡೆಡ್‍ಲೈನ್ ನೀಡಿದ್ದಾರೆ. ಬಿಜೆಪಿಯಿಂದ ಸಮಾಧಾನಕರ ಉತ್ತರ ಬರದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ:ಶಿವಮೊಗ್ಗ: ಪುತ್ರಿ ಬಿಜೆಪಿ ಸೇರ್ಪಡೆಗೆ ಕಾಗೋಡು ತಿಮ್ಮಪ್ಪ ಅಸಮಾಧಾನ
ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಕಳೆದ 14 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದೇನೆ. 2018ರಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುವುದನ್ನು ಕೇಂದ್ರ ಸಚಿವರೊಬ್ಬರು ತಪ್ಪಿಸಿದ್ದರು. ಈಗ ಸಚಿವ ಆರ್.ಅಶೋಕ್ ಹಾಗೂ ಸಂಸದ ತೇಜಸ್ವಿ ಸೂರ್ಯ ತಪ್ಪಿಸಿದ್ದಾರೆ ಎಂದು ನೇರವಾಗಿ ಕಿಡಿಕಾರಿದರು.
ಇದನ್ನೂ ಓದಿ:ಹಳೆ ಬೇರು, ಹೊಸ ಚಿಗುರಿಗೆ ಆದ್ಯತೆ; ಬಂಡಾಯ ಸರಿಯಾಗುತ್ತದೆ: ಸಿ.ಟಿ.ರವಿ
ಜಯನಗರ ಕ್ಷೇತ್ರದಿಂದ ನಾನು ಕೂಡ ಪ್ರಭಾವಿ ಆಕಾಂಕ್ಷಿಯಾಗಿದ್ದು, ಅನೇಕ ಸರ್ವೇಗಳಲ್ಲಿ ನನ್ನ ಹೆಸರು ಕೇಳಿಬಂದಿತ್ತು. ಆದರೆ, ಈಗ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿರುವುದು ಆಘಾತ ತಂದಿದೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೆ ತಂದಿದ್ದೇನೆ. ಸಿಎಂ ಕೂಡ ಭರವಸೆ ನೀಡಿದ್ದು, 24 ಗಂಟೆಯೊಳಗೆ ಬಿಜೆಪಿಯ ವರಿಷ್ಠರಿಂದ ಸಮಾಧಾನಕರ ಉತ್ತರ ಬರದಿದ್ದರೆ ತನ್ನ ಮುಂದಿನ ನಡೆಯನ್ನು ತಿಳಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಕೈ ತಪ್ಪಿದ ಬೈಲಹೊಂಗಲ ಟಿಕೆಟ್: ಬಿಜೆಪಿ ವಿರುದ್ಧ ಡಾ.ವಿಶ್ವನಾಥ ಪಾಟೀಲ ಬಂಡಾಯ
ಪದ್ಮನಾಭ ನಗರ ಕ್ಷೇತ್ರದಿಂದ ಸ್ಪರ್ಧೆ:ಈಗಾಗಲೇ ಕೆಲ ಪಕ್ಷಗಳ ವರಿಷ್ಠರು ನನ್ನೊಟ್ಟಿಗೆ ಮಾತನಾಡಿದ್ದಾರೆ. ಒಂದು ವೇಳೆ ಟಿಕೆಟ್ ಕೈತಪ್ಪಿದರೆ ಪದ್ಮನಾಭನಗರದಿಂದಲೇ ಸ್ಪರ್ಧಿಸುವುದು ಖಚಿತ. ಜತೆಗೆ ಪದ್ಮನಾಭ ನಗರ ಕ್ಷೇತ್ರದಿಂದ ಹಲವು ಕಾರ್ಯಕರ್ತರು ಹಾಗೂ ಪಾಲಿಕೆ ಮಾಜಿ ಸದಸ್ಯರು, ಮುಖಂಡರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದರು. ಚಿಕ್ಕಪೇಟೆ ಹಾಗೂ ಪದ್ಮನಾಭನಗರದಿಂದ ಅಭ್ಯರ್ಥಿಯಾಗಬೇಕೆಂದು ಈಗಾಗಲೇ ಕೋರಿಕೆಗಳು ಬಂದಿದ್ದವು. ಬಿಜೆಪಿ ವರಿಷ್ಠರು ನನ್ನ ಸೇವೆ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಒತ್ತನ್ನು ಪರಿಗಣಿಸಿ ಟಿಕೆಟ್ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನನ್ನ ನಿಲುವು ತಿಳಿಸುತ್ತೇನೆ ಎಂದು ಬಿಜೆಪಿಗೆ ಎಚ್ಚರಿಸಿದರು.
ಇದನ್ನೂ ಓದಿ:ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶಿವಮೊಗ್ಗ ಬಿಜೆಪಿ ಘಟಕದ ಜವಾಬ್ದಾರಿಗಳಿಗೆ ಪಾಲಿಕೆ ಸದಸ್ಯರ ರಾಜೀನಾಮೆ
ಸದಸ್ಯರ ರಾಜೀನಾಮೆ:ಎನ್. ಆರ್ ರಮೇಶ್ಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದನ್ನು ವಿರೋಧಿಸಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು, ಕೆರೆಸಂದ್ರ ಮತ್ತು ಗಣೇಶ ಮಂದಿರ ವಾರ್ಡ್‌ಗಳ ಸುಮಾರು 1,250 ತಳಮಟ್ಟದ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಯಡಿಯೂರು ವಾರ್ಡ್ ಅಧ್ಯಕ್ಷ ಮಂಜೇಗೌಡ ಅವರು ಪತ್ರ ಕಳಿಸಿದ್ದಾರೆ. ಟಿಕೆಟ್ ನೀಡದಿರುವ ಬೇಸರದಿಂದ ಯಡಿಯೂರು, ಕೆರೆಸಂದ್ರ ಮತ್ತು ಗಣೇಶ ಮಂದಿರ ವಾರ್ಡ್‌ಗಳ ಸುಮಾರು 1250 ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ :ಬಿಜೆಪಿ ಟಿಕೆಟ್ ಹಂಚಿಕೆ: ಬಾದಾಮಿ ಮತ ಕ್ಷೇತ್ರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ