ಕರ್ನಾಟಕ

karnataka

ETV Bharat / state

ಬೆಂಗಳೂರಿನ ಎಫ್​ಎಸ್​ಎಲ್​ ಕೇಂದ್ರಕ್ಕೂ ಕೊರೊನಾ ಎಂಟ್ರಿ! - ಎಫ್​ಎಸ್​ಎಲ್​ ಕೇಂದ್ರಕ್ಕೆ ಕೊರೊನಾ ಎಂಟ್ರಿ,

ಪೊಲೀಸ್​ ಠಾಣೆ, ಅಗ್ನಿಶಾಮಕ ದಳ, ಎಸಿಬಿ ಸೇರಿದಂತೆ ಅನೇಕ ಇಲಾಖೆಗಳಿಗೆ ಕೊರೊನಾ ಎಂಟ್ರಿ ಕೊಟ್ಟಿತ್ತು. ಈಗ ಎಫ್​ಎಸ್​ಎಲ್​ ಕೇಂದ್ರಕ್ಕೂ ಕೊರೊನಾ ಕಾಲಿಟ್ಟಿದ್ದು, ಸಿಬ್ಬಂದಿಯಲ್ಲಿ ಆತಂಕದ ಮೂಡಿಸಿದೆ.

corona entry to FSL center, corona entry to FSL center in Bangalore, FSL center corona, FSL center corona news, FSL center corona latest news, ಎಫ್​ಎಸ್​ಎಲ್​ ಕೇಂದ್ರಕ್ಕೆ ಕೊರೊನಾ ಎಂಟ್ರಿ, ಬೆಂಗಳೂರಿನ ಎಫ್​ಎಸ್​ಎಲ್​ ಕೇಂದ್ರಕ್ಕೆ ಕೊರೊನಾ ಎಂಟ್ರಿ, ಎಫ್​ಎಸ್​ಎಲ್​ ಕೇಂದ್ರ ಕೊರೊನಾ ಸುದ್ದಿ,
ಬೆಂಗಳೂರಿನ ಎಫ್​ಎಸ್​ಎಲ್​ ಕೇಂದ್ರಕ್ಕೆ ಕೊರೊನಾ ಎಂಟ್ರಿ

By

Published : Jul 8, 2020, 7:41 PM IST

ಬೆಂಗಳೂರು: ಇಷ್ಟು ದಿನ ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ಎಸಿಬಿ, ಸಿಐಡಿ, ಕೆಎಸ್​ಆರ್​ಪಿ, ಹೋಮ್ ಗಾರ್ಡ್‌, ಸಿಸಿಬಿಗೆ ಕೊರೊನಾ ಕಂಟಕವಾಗಿತ್ತು. ಆದರೆ ಸದ್ಯ ನಗರದ ಮಡಿವಾಳದ ಎಫ್​ಎಸ್​ಎಲ್​ ಕೇಂದ್ರಕ್ಕೂ ಕೊರೊನಾ ಸೋಂಕು ತಟ್ಟಿದೆ.

ಮಡಿವಾಳ ಎಫ್​ಎಸ್​ಎಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸದ್ಯ ವಿಧಿ ವಿಜ್ಞಾನಾಲಯವನ್ನು ಸ್ಯಾನಿಟೈಸ್ ಮಾಡಿ ಕೊರೊನಾ ಸೋಂಕಿತರನ್ನ ಸಂಬಂಧಿಸಿದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಪ್ರಾಥಮಿಕ ಸಂಪರ್ಕದಲ್ಲಿರುವವರ ಮಾಹಿತಿ ಕಲೆಹಾಕಿ ಕ್ವಾರಂಟೈನ್ ಇರುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಇಂದಿನಿಂದ ಮೂರು ದಿವಸಗಳ ಕಾಲ ಎಫ್​ಎಸ್​ಎಲ್​ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.

ನಗರದಲ್ಲಿ ಏನೇ ಕ್ರೈಂ ಚಟುವಟಿಕೆಗಳು ನಡೆದಾಗ ಎಫ್​ಎಸ್​ಎಲ್​ ರಿಪೋರ್ಟ್​ ಅಗತ್ಯವಾಗಿರುತ್ತದೆ.‌ ಸದ್ಯ ಕೊರೊನಾ ವಕ್ಕರಿಸಿದ ಕಾರಣ ಸಿಬ್ಬಂದಿ ಯಾವುದೇ ಚಟುವಟಿಕೆ‌ ನಡೆಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details