ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಪೊಲೀಸರ ಗುಂಡಿನ ಸದ್ದು ಕೇಳಿದೆ. ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ರೌಡಿಶೀಟರ್ಗೆ ಚಿಕಿತ್ಸೆ ಸಿದ್ದ ಅಲಿಯಾಸ್ ಸಿದ್ದರಾಜು ಅಲಿಯಾಸ್ ಬಗಲಗುಂಟೆ ಸಿದ್ದನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ನಗರದ ಹಲವೆಡೆ ಈತನ ಮೇಲೆ ಸುಮಾರು 15 ಕೇಸ್ಗಳು ದಾಖಲಾಗಿದ್ದು, ಪೊಲೀಸರಿಗೆ ಹಲವಾರು ಪ್ರಕರಣದಲ್ಲಿ ಬೇಕಾಗಿದ್ದ.
ಈತನಿಗಾಗಿ ಪೊಲೀಸರ ತಂಡ ಬಹಳ ದಿನಗಳಿಂದ ಹುಡುಕಾಟ ನಡೆಸಿತ್ತು. ಆದರೆ ಇಂದು ಮುಂಜಾನೆ ಆರೋಪಿ ಬ್ಯಾಡರಹಳ್ಳಿಯ ಆಶ್ರಯ ಬಡಾವಣೆಯಲ್ಲಿ ಇರುವ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ಹಾಗೂ ತಂಡ ಬಂಧಿಸಲು ತೆರಳಿತ್ತು. ಈ ವೇಳೆ ಬ್ಯಾಡರಳ್ಳಿ ಪೇದೆ ಹನುಮಂತರಾಜುಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇನ್ಸ್ಪೆಕ್ಟರ್ ರಾಜೀವ್ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ಮೇಲೆ ಮತ್ತೆ ಹಲ್ಲೆಗೆ ಮುಂದಾದಾಗ ಸಿದ್ದನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖವಾದ ನಂತರ ಕಾಮಾಕ್ಷಿಪಾಳ್ಯ, ರಾಜಗೋಪಾಲನಗರ ರೌಡಿಶೀಟರ್ ಪ್ರಕರಣ ಹಾಗೂ ಉಳಿದ ಪ್ರಕರಣಗಳಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.