ಕರ್ನಾಟಕ

karnataka

ETV Bharat / state

ನಟೋರಿಯಸ್ ರೌಡಿಶೀಟರ್ ಚಂದ್ರಶೇಖರ್ ಅಲಿಯಾಸ್ ಗನ್ ಮಂಜ ಬಂಧನ - ಯಶವಂತಪುರ ಪೊಲೀಸ್​ ಠಾಣೆ

ನಿರಂತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದ.‌ ಈತನ ಕೃತ್ಯಗಳಿಗೆ ಕಡಿವಾಣ ಹಾಕಲು ರೌಡಿಶೀಟರ್ ಮೇಲೆ ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ..

ಗನ್ ಮಂಜ ಬಂಧನ
ಗನ್ ಮಂಜ ಬಂಧನ

By

Published : May 28, 2021, 4:34 PM IST

ಬೆಂಗಳೂರು :ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನು‌ ಸುವ್ಯವಸ್ಥೆಗೆ ಸವಾಲೆಸೆದಿದ್ದ ನಟೋರಿಯಸ್ ರೌಡಿ ಚಂದ್ರಶೇಖರ್ ಆಲಿಯಾಸ್ ಗನ್ ಮಂಜನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಈತ ಕೊಲೆ, ಕೊಲೆಯತ್ನ,ರಾಬರಿ,ಬೆದರಿಕೆ, ಡ್ರಗ್ಸ್‌ ಕೇಸ್ ಸೇರಿದಂತೆ ಒಟ್ಟು 13 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಜೈಲಿನಿಂದ ಜಾಮೀನು ದೊರೆತ ಬಳಿಕ ನ್ಯಾಯಾಲಯಕ್ಕೆ ಗೈರು ಹಾಜರಾಗಿ ತಲೆಮರೆಸಿಕೊಂಡಿದ್ದ.

ನಿರಂತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದ.‌ ಈತನ ಕೃತ್ಯಗಳಿಗೆ ಕಡಿವಾಣ ಹಾಕಲು ರೌಡಿಶೀಟರ್ ಮೇಲೆ ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಈ ಕಾಯ್ದೆಯಡಿ ಬಂಧಿಯಾದ್ರೆ ಒಂದು ವರ್ಷದವರೆಗೂ ನ್ಯಾಯಾಲಯದಲ್ಲಿ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಟಿಎಮ್​ಗೆ ಹೋಗಿದ್ದಕ್ಕೆ ರಕ್ತ ಬರೋ ತರ ಹೊಡೆಯೋದಾ: ಹುಬ್ಬಳ್ಳಿಯಲ್ಲಿ ಪೊಲೀಸ್​ ದರ್ಪ

ABOUT THE AUTHOR

...view details