ಕರ್ನಾಟಕ

karnataka

ETV Bharat / state

KARTET Notification: ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅಧಿಸೂಚನೆ ಪ್ರಕಟ; ಆಗಸ್ಟ್​​ 5 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಶಿಕ್ಷಕರ ಹುದ್ದೆಗಾಗಿ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಕೆಎಆರ್​ಟಿಟಿಇ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗಿದೆ.

Notification of KARTET published by Department of Publication Education
Notification of KARTET published by Department of Publication Education

By

Published : Jul 14, 2023, 1:33 PM IST

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಬಂಪರ್​ ಸುದ್ದಿ ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. 1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಈ ಪರೀಕ್ಷೆಯ ಅರ್ಹತೆಯನ್ನು ನಿಗದಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ನಡೆಯುವ ಈ ಕೆಎಆರ್​ಟಿಟಿಇ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಆಗಸ್ಟ್​ 5 ಕಡೆಯ ದಿನಾಂಕವಾಗಿದೆ. ಈ ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ:

ಪತ್ರಿಕೆ 1(1ರಿಂದ 5ನೇ ತರಗತಿ):

ಪಿಯುಸಿ ಪರೀಕ್ಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು. ಜೊತೆಗೆ ಎರಡು ವರ್ಷದ ಡಿಎಡ್​ ಕೋರ್ಸಿನಲ್ಲಿ ತೇರ್ಗಡೆ ಹೊಂದಿರಬೇಕು. ಅಥವಾ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್​ ಅಥವಾ ಎರಡು ವರ್ಷದ ಡಿಪ್ಲೋಮೋ ಇನ್​ ಎಜುಕೇಶನ್​ ಅಥವಾ ಬಿಎಡ್​​ ಪದವಿಯನ್ನು ಪೂರ್ಣಗೊಳಿಸರಬೇಕು. ಈ ಕೋರ್ಸ್​​ಗಳ ಪ್ರವೇಶಕ್ಕೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪತ್ರಿಕೆ 2: ಪದವಿಯಲ್ಲಿ ಕನಿಷ್ಠ 50ರಷ್ಟು ಅಂಕ ಗಳಿಸಿರಬೇಕು. ಜೊತೆಗೆ ಎರಡು ವರ್ಷದ ಡಿಎಲ್​.ಎಡ್​​ ಅಥವಾ ಬಿಇಡಿ ಪದವಿ ಅಥವಾ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್​ ಅಥವಾ ಎರಡು ವರ್ಷದ ಬಿಇಡಿ (ವಿಶೇಷ ಶಿಕ್ಷಣ)ದಲ್ಲಿ ತೇರ್ಗಡೆ ಹೊಂದಿದ ಹಾಗೂ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ಈ ಹುದ್ದೆಗೆ ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಪತ್ರಿಕೆ-1 ಅಥವಾ ಪ್ರತಿಕೆ-2 (ಎರಡರಲ್ಲಿ ಒಂದಕ್ಕೆ ಅರ್ಜಿ ಸಲ್ಲಿಕೆ)

ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 700 ರೂ

ಪ.ಜಾ, ಪ. ವರ್ಗ, ಪ್ರವರ್ಗ-1 -350 ರೂ

ಪತ್ರಿಕೆ-1 ಹಾಗೂ ಪತ್ರಿಕೆ-2 (ಎರಡು ಪತ್ರಿಕೆ ಅರ್ಜಿ ಸಲ್ಲಿಕೆಗೆ)

ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 1000 ರೂ

ಪ.ಜಾ, ಪ. ವರ್ಗ, ಪ್ರವರ್ಗ-1 -500 ರೂ

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಜುಲೈ 14 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​​ 5 ಆಗಿದೆ. ಶುಲ್ಕ ಪಾವತಿಗೂ ಕೂಡ ಆಗಸ್ಟ್​ 5 ಕಡೆಯ ದಿನವಾಗಿದೆ.

ಅಧಿಸೂಚನೆ

ಪ್ರವೇಶ ಪತ್ರ:

ಈ ಹುದ್ದೆಗೆ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆಗಸ್ಟ್​​ 23 ರಿಂದ ಸೆಪ್ಟೆಂಬರ್​ 1ರಿಂದ ಇಲಾಖೆಯ ವೆಬ್​ಸೈಟ್​​ www.schooleducation.kar.nic.in ನಲ್ಲಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಭ್ಯರ್ಥಿಗಳುhttps://www.schooleducation.kar.nic.in/ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ಸಮೂನೆಯನ್ನು ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಸಂಪೂರ್ಣ ಅಧಿಸೂಚನೆಯನ್ನು ಪರಿಶೀಲಿ ಮುಂದುವರೆಯಬೇಕು. ಬಳಿಕ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್schooleducation.kar.nic.in​ಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ವಿವಿಧ ಪದವೀಧರರ ನೇಮಕಾತಿ: ಬೆಂಗಳೂರಲ್ಲೇ ಇದೆ ಹುದ್ದೆ

ABOUT THE AUTHOR

...view details