ಬೆಂಗಳೂರು :ಶಾಸಕರ ಆಪ್ತ ಸಹಾಯಕರು ಹಾಗೂ ಅತಿಥಿಗಳು ಇನ್ಮುಂದೆ ಶಾಸಕರ ಭವನದ ವಾಹನ ನಿಲುಗಡೆ ಸ್ಥಳದಲ್ಲಿ ವಾಹನ ಪಾರ್ಕಿಂಗ್ ಮಾಡುವಂತಿಲ್ಲ.
ಶಾಸಕರ ಭವನದ ವಾಹನ ನಿಲುಗಡೆ ಪ್ರದೇಶಗಳಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ, ಶಾಸಕರ ಮತ್ತು ಶಾಸಕರ ಭವನದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳನ್ನು ಜುಲೈ 10ರೊಳಗೆ ತೆರವುಗೊಳಿಸಲು ವಿಧಾನಸಭೆ ಸಚಿವಾಲಯ ಸೂಚಿಸಿದೆ. ಒಂದು ವೇಳೆ ತೆರವುಗೊಳಿಸದಿದ್ರೆ, ಅನಧಿಕೃತ ವಾಹನಗಳೆಂದು ಪರಿಗಣಿಸಿ ಪೊಲೀಸ್ ಸಿಬ್ಬಂದಿಯಿಂದ ತೆರವುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸಚಿವಾಲಯ ತಿಳಿಸಿದೆ.
ಶಾಸಕರ ಭವನದ ಕಟ್ಟಡಗಳಲ್ಲಿನ ಪಾರ್ಕಿಂಗ್‌ನಲ್ಲಿ ಶಾಸಕರ ಮತ್ತು ಶಾಸಕರ ಭವನದ ವಾಹನಗಳಿಗೆ ಮಾತ್ರ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಈ ಸ್ಥಳಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಶಾಸಕರ ಆಪ್ತ ಸಿಬ್ಬಂದಿಯ ವಾಹನಗಳನ್ನು ನಿಲ್ಲಿಸಲಾಗಿದೆ. ಶಾಸಕರ ಆಪ್ತ ಸಿಬ್ಬಂದಿಯ ವಾಹನಗಳನ್ನು ತಿಂಗಳುಗಳು ಕಳೆದರೂ ತೆರವುಗೊಳಿಸದೆ ಇರುವುದು ಕಂಡು ಬಂದಿರುತ್ತದೆ.