ಕರ್ನಾಟಕ

karnataka

ETV Bharat / state

ಶಾಸಕ ರಾಜಕುಮಾರ್​ ಬಳಿ 2 ಕೋಟಿ ರೂ. ಬೇಡಿಕೆ‌ ಆರೋಪ : ಇಂದು ವಿಚಾರಣೆಗೆ ಹಾಜರಾಗಲು ಸಂತ್ರಸ್ತೆಗೆ ನೋಟಿಸ್​

ಪೊಲೀಸರಿಂದ ಸಣ್ಣ-ಪುಟ್ಟ ತಪ್ಪುಗಳಾಗಿವೆ. ಒಂದು ಮೊಬೈಲ್ ವಶಪಡೆಸಿಕೊಂಡಿದ್ದರು ಎಂಬುವುದು ಗೊತ್ತಾಗಿದೆ. ನಿನ್ನೆ ಬೆಳಗ್ಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ.

notice-to-woman-to-attend-for-investigation-in-bjp-mla-blackmail-case
ಬಿಜೆಪಿ ಶಾಸಕನಿಗೆ 2 ಕೋಟಿ ಬೇಡಿಕೆ‌ ಆರೋಪ

By

Published : Feb 7, 2022, 9:07 PM IST

Updated : Feb 8, 2022, 5:05 AM IST

ಬೆಂಗಳೂರು : 2 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಆರೋಪ ಸಂಬಂಧ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ಇಂದು ವಿಚಾರಣೆಗೆ ಹಾಜರಾಗುವಂತೆ ಮಹಿಳೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬ್ಲಾಕ್​ಮೇಲ್‌ ಪ್ರಕರಣ ಸಂಬಂಧ ಮಹಿಳೆ ಪರ ವಕೀಲ ಜಗದೀಶ್ ಮಾತನಾಡಿ, ನನ್ನ ಕಕ್ಷಿದಾರರು ನಿನ್ನೆ ಬೆಳಗ್ಗೆ ಶಾಸಕರ ವಿರುದ್ಧ‌ ಹಾಗೂ ಪೊಲೀಸರ ವರ್ತನೆ ಬಗ್ಗೆ ಆರೋಪಿಸಿದ್ದರು. ಈ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಠಾಣೆಗೆ ಬಂದಿದ್ದೇನೆ.

ಪೊಲೀಸರಿಂದ ಸಣ್ಣ-ಪುಟ್ಟ ತಪ್ಪುಗಳಾಗಿವೆ. ಒಂದು ಮೊಬೈಲ್ ವಶಪಡೆಸಿಕೊಂಡಿದ್ದರು ಎಂಬುವುದು ಗೊತ್ತಾಗಿದೆ. ನಿನ್ನೆ ಬೆಳಗ್ಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕನ ವಿರುದ್ಧ ಮಹಿಳೆಯಿಂದ ದೌರ್ಜನ್ಯ ಆರೋಪ: ನಾನು ತಪ್ಪೇ ಮಾಡಿಲ್ಲ ಎಂದ ತೆಲ್ಕೂರ

ಅಲ್ಲದೆ, ಇಂದು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಮಧ್ಯಾಹ್ನ 3 ಖಾಸಗಿ ದೂರು (ಪಿಸಿಆರ್) ನೀಡುತ್ತೇವೆ. ಅದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ನನ್ನ ಕಕ್ಷಿದಾರರನ್ನ ವಿಚಾರಣೆಗಾಗಿ ಪೊಲೀಸರು ಕರೆದಿದ್ದಾರೆ. ವ್ಯಾಟ್ಸ್‌ಆ್ಯಪ್ ಮೂಲಕ ಮಹಿಳೆಗೆ ಪೊಲೀಸರು ನೋಟಿಸ್ ಕಳಿಸಿದ್ದಾರೆ. ಬೆಳಗ್ಗೆ ನನ್ನ ಕಕ್ಷಿದಾರರು ವಿಚಾರಣೆಗೆ ಬಂದು ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ನನ್ನ ಮಗು ಅಲ್ಲ ಎಂದು ಶಾಸಕರು ಮನೆ ದೇವರ ಮೇಲೆ ಆಣೆ ಮಾಡಲಿ: ಸಂತ್ರಸ್ತೆ ಗಂಭೀರ ಆರೋಪ

Last Updated : Feb 8, 2022, 5:05 AM IST

ABOUT THE AUTHOR

...view details