ಬೆಂಗಳೂರು :ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ಕೊಡಲು ಮುಂದಾಗಿದೆ. ಸ್ಥಿರಾಸ್ತಿ ಮೇಲಿನ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಕೋವಿಡ್ ಬಂದ ಬಳಿಕ ರಿಯಲ್ ಎಸ್ಟೇಟ್ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇತ್ತ ಸಂಘ-ಸಂಸ್ಥೆಗಳು ಮಾರ್ಗಸೂಚಿ ದರವನ್ನು ಕಡಿಮೆ ಮಾಡುವಂತೆ ಮನವಿಯನ್ನೂ ಮಾಡಿದ್ದವು. ಇದೀಗ ಸರ್ಕಾರ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ಮುಂದಾಗಿದೆ.
ಈ ಬಗ್ಗೆ ಮಾತಮಾಡಿದ ಅವರು, ಸ್ಥಿರಾಸ್ತಿ ನೋಂದಣಿ ಮುದ್ರಾಂಕ ಶುಲ್ಕ ಜಾಸ್ತಿ ಇದೆ. ಕಡಿಮೆ ಮಾಡಬೇಕು ಅನ್ನುವ ಮನವಿ ಇತ್ತು. ಕಳೆದ ಆರು ತಿಂಗಳಿಂದ ಈ ಬಗ್ಗೆ ಹಲವರು ಮನವಿ ಮಾಡಿದ್ದಾರೆ. ಈ ಸಂಬಂಧ ಸ್ಥಿರಾಸ್ಥಿ ಮಾರ್ಗಸೂಚಿ ದರ ಕಡಿಮೆ ಮಾಡುವುದಕ್ಕೆ ಇಂದು ಸಭೆ ಮಾಡಿದ್ದೆವು. ಈಗಾಗಲೇ 45 ಲಕ್ಷದವರೆಗಿನ ಫ್ಲ್ಯಾಟ್‌ಗೆ ಶೇ.5%ರಿಂದ ಶೇ.3ರವರೆಗೆ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.