ಕರ್ನಾಟಕ

karnataka

ETV Bharat / state

ರಾಜ್ಯದ 2,333 ಕೋಟಿ ರೂ. ಬಾಕಿ ಜಿಎಸ್​​​ಟಿ ಪರಿಹಾರ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರ ಸೂಚನೆ - GST Council meeting

GST Compensation: ರಾಜ್ಯಕ್ಕೆ ಜಿಎಸ್​​​ಟಿ ಬಾಕಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.

notice-to-release-pending-gst-compensation-rs-2333-crore-for-karnataka
ರಾಜ್ಯದ 2,333 ಕೋಟಿ ಬಾಕಿ ಜಿಎಸ್​​​ಟಿ ಪರಿಹಾರ ಬಿಡುಗಡೆಗೆ ಕೇಂದ್ರ ಹಣಕಾಸು ಸಚಿವರ ಸೂಚನೆ

By ETV Bharat Karnataka Team

Published : Oct 7, 2023, 7:35 PM IST

ಬೆಂಗಳೂರು:ರಾಜ್ಯಕ್ಕೆ 2,333 ಕೋಟಿ ರೂ. ಜಿಎಸ್​​​ಟಿ ಪರಿಹಾರ ಬಿಡುಗಡೆ ಮಾಡುವಂತೆ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿತು. ಈ ಸಂಬಂಧ ಕೂಡಲೇ ಜಿಎಸ್​​ಟಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಇಂದು 52ನೇ ಜಿಎಸ್​​ಟಿ ಕೌನ್ಸಿಲ್ ಸಭೆ ನಡೆದಿದ್ದು, ರಾಜ್ಯದ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಸಚಿವರು ರಾಜ್ಯಕ್ಕೆ 2,333 ಕೋಟಿ ರೂ. ಜಿಎಸ್ ಟಿ ಪರಿಹಾರ ಬಾಕಿ ಉಳಿದುಕೊಂಡಿದೆ. ಅದನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಬಾಕಿ ಜಿಎಸ್​​ಟಿ ಪರಿಹಾರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಇದೇ ವೇಳೆ ರಾಜ್ಯದ ಮನವಿ ಮೇರೆಗೆ, ಅನ್ ಲೇಬಲ್ಡ್ ರಾಗಿ ಮಿಶ್ರಣಕ್ಕೆ ಜಿಎಸ್​​ಟಿಯಿಂದ ರಿಯಾಯತಿ ನೀಡಲಾಗಿದೆ. ಲೇಬಲ್ಡ್ ರಾಗಿ ಮಿಶ್ರಣಕ್ಕೆ 12/18% ಜಿಎಸ್​ಟಿ ಬದಲು ಕೇವಲ 5% ಜಿಎಸ್​​ಟಿ ವಿಧಿಸಲು ನಿರ್ಧರಿಸಲಾಗಿದೆ. ಸಿರಿ ಧಾನ್ಯಗಳ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವಂತೆ ರಾಜ್ಯ ಸರ್ಕಾರ ಒತ್ತಾಯಿಸುತ್ತಲೇ ಇದೆ.

ಸಭೆಯಲ್ಲಿ ತಂಬಾಕು, ತಂಪು ಪಾನೀಯಗಳು, ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಮೇಲು ಸುಂಕದ (ಸೆಸ್‌) ಮೊತ್ತವನ್ನು ಈಗ ಕೋವಿಡ್‌ ಅವಧಿಯಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಸಾಲ ಮರುಪಾವತಿ ಆದ ಬಳಿಕ ಸೆಸ್‌ಗಳನ್ನು ಹಂಚಿಕೆ ಮಾಡುವ ಕುರಿತೂ ಮಾಹಿತಿ ಹಂಚಿಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.

ಇದನ್ನೂ ಓದಿ:ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 52ನೇ ಜಿಎಸ್‌ಟಿ ಕೌನ್ಸಿಲ್ ಸಭೆ

ABOUT THE AUTHOR

...view details