ಕರ್ನಾಟಕ

karnataka

ETV Bharat / state

ಫೋನ್ ಟ್ಯಾಪಿಂಗ್ ಆರೋಪ​ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಶಾಸಕ ಅರವಿಂದ್ ಬೆಲ್ಲದ್​ಗೆ ನೋಟಿಸ್ - ವಿಚಾರಣೆಗೆ ಹಾಜರಾಗಲು ನೋಟಿಸ್

ಫೋನ್ ಕದ್ದಾಲಿಕೆ ಮಾಡಿ ನನ್ನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಗಂಭೀರ ಆರೋಪ ಮಾಡಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ನೀಡಿದ್ದಾರೆ.

Notice to MLA Arvind Bellad
ಪೋನ್ ಟ್ಯಾಪಿಂಗ್​ ಪ್ರಕರಣ

By

Published : Jun 23, 2021, 1:29 PM IST

Updated : Jun 23, 2021, 1:45 PM IST

ಬೆಂಗಳೂರು : ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಕಬ್ಬನ್ ಪಾರ್ಕ್ ಠಾಣೆ ಎಸಿಪಿ ಯತಿರಾಜ್ ಜಾಗಕ್ಕೆ ಶೇಷಾದ್ರಿಪುರ ಎಸಿಪಿಯನ್ನು ನಿಯೋಜಿಸುವಂತೆ ನಗರ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಆದೇಶಿಸಿದ್ದಾರೆ. ಅಲ್ಲದೆ, ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಾಸಕ ಬೆಲ್ಲದ್​ ಅವರಿಗೆ ನೋಟಿಸ್​ ನೀಡಲಾಗಿದೆ.

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಪೊಲೀಸ್ ಕಮೀಷನರ್ ಆಗಿದ್ದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಇದೀಗ ಶೇಷಾದ್ರಿಪುರದ ಮಹಿಳಾ ಎಸಿಪಿ ಪೃಥ್ವಿ ಅವರಿಗೆ ವಹಿಸಲಾಗಿದೆ.

ವಿಚಾರಣೆಗೆ ಹಾಜರಾಗುವಂತೆ ಬೆಲ್ಲದ್​ಗೆ ನೊಟೀಸ್ :

ಫೋನ್‌ ಕದ್ದಾಲಿಕೆ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ನಿಯೋಜಿತ ಎಸಿಪಿ ಪೃಥ್ವಿ, ವಿಚಾರಣೆಗೆ ಹಾಜರಾಗುವಂತೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್​​ಗೆ ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ ಡಿಸಿಪಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.

ಮತ್ತೊಂದೆಡೆ ಬೆಲ್ಲದ್ ನೀಡಿದ್ದ ನಂಬರ್​ನ ಸಿಡಿಆರ್ ಪಡೆದ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯು ಹೈದರಾಬಾದ್​ ಮೂಲದವನು ಎಂಬುದನ್ನು ಪತ್ತೆ ಹಚ್ಚಿದ್ದಾರೆ‌. ತನಿಖೆ ವೇಳೆ ಆತ ಶಾಸಕರ ಆಪ್ತ ಎಂಬುದು ಬಯಲಿಗೆ ಬಂದಿದೆ. ಶಾಸಕರಿಗೆ ನಾನು ತುಂಬಾ ಆಪ್ತ ಎಂದು ಸಿಮ್ ವಾರಸುದಾರ ಹೇಳಿಕೊಂಡಿದ್ದಾನೆ‌.

ಓದಿ : ಶಾಸಕ ಅರವಿಂದ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣ : ಕರೆಯ ಮೂಲ ಹೈದರಾಬಾದ್

Last Updated : Jun 23, 2021, 1:45 PM IST

ABOUT THE AUTHOR

...view details