ಬೆಂಗಳೂರು : ಚುನಾವಣಾ ಘೋಷವಾಕ್ಯವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇನ್ನಿತರ ಕಚೇರಿಗಳ ಪತ್ರ ವ್ಯವಹಾರಗಳಲ್ಲಿ ಹಾಗೂ ಇಲಾಖೆಗಳ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸಲು ಕೋರಲಾಗಿದೆ. ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುಣಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತದಾನ ಹಾಗೂ ಚುನಾವಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು 'ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ' ಎಂಬ ಘೋಷವಾಕ್ಯವನ್ನು ಪ್ರದರ್ಶಿಸಲು ಸೂಚಿಸಲಾಗಿದೆ.
ಸರ್ಕಾರಿ ಇಲಾಖೆಗಳ ಜಾಲತಾಣಗಳಲ್ಲಿ ಚುನಾವಣಾ ಘೋಷವಾಕ್ಯ ಪ್ರದರ್ಶಿಸಲು ಸೂಚನೆ
'ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ' ಎಂಬ ಘೋಷವಾಕ್ಯ ಸರ್ಕಾರಿ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸಲು ಕೋರಲಾಗಿದೆ.
ಸರ್ಕಾರಿ ಇಲಾಖೆಗಳ ಜಾಲತಾಣಗಳಲ್ಲಿ ಚುನಾವಣಾ ಘೋಷವಾಕ್ಯ ಪ್ರದರ್ಶಿಸಲು ಸೂಚನೆ
ಇದು ಈ ಬಾರಿಯ ಘೋಷವಾಕ್ಯವಾಗಿದ್ದು, ಈ ಘೋಷವಾಕ್ಯವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಇನ್ನಿತರ ಕಚೇರಿಗಳ ಪತ್ರ ವ್ಯವಹಾರಗಳಲ್ಲಿ ಹಾಗೂ ಇಲಾಖೆಗಳ ಜಾಲತಾಣಗಳ ಮುಖಪುಟಗಳಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಡುವ ಕಚೇರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆ ಮೂಲಕ ತಮ್ಮನ್ನು ಕೋರಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ಇದನ್ನೂ ಓದಿ :ಮಾತೃಭಾಷೆಯಲ್ಲಿ ಪರೀಕ್ಷೆ: ಯುಜಿಸಿ ಕ್ರಮ ಸ್ವಾಗತಿಸಿದ ಡಾ.ಮಹೇಶ್ ಜೋಶಿ