ಕರ್ನಾಟಕ

karnataka

ETV Bharat / state

ಹಲಾಲ್ ಕಟ್ ವಿವಾದದ ಬೆನ್ನಲ್ಲೇ ಮಾಂಸ ವ್ಯಾಪಾರಿಗಳಿಗೆ ಶಾಕ್..

ಸ್ಲಾಟರ್ ಹೌಸ್​ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ.

ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್
ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್

By

Published : Apr 30, 2022, 10:58 PM IST

Updated : May 2, 2022, 12:04 PM IST

ಬೆಂಗಳೂರು: ಹಲಾಲ್ ಕಟ್ ವಿವಾದದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್ ನೀಡಲಾಗಿದೆ.‌ ಈ ಮೂಲಕ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.

ಸ್ಲಾಟರ್ ಹೌಸ್​ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ. ಮೇಕೆ, ಕುರಿ, ಕೋಳಿ, ಎಮ್ಮೆಗಳ ವಧೆ ಮಾಡುವ ಕೇಂದ್ರಗಳಾಗಿರುವ ಸ್ಲಾಟರ್ ಹೌಸ್​ಗಳನ್ನ ಕ್ಲೋಸ್ ಮಾಡಲು ಸೂಚಿಸಿದೆ.

ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್

ಅಂತೆಯೇ ಕೆ.ಆರ್ ಮಾರ್ಕೆಟ್ ಹಾಗೂ ಫ್ರೇಜರ್ ಟೌನ್ ಬಳಿ ಎರಡು ಸ್ಲಾಟರ್ ಹೌಸ್ ಮುಚ್ಚಿಸಲು ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿ ದಿನ 5 ಸಾವಿರ ಕುರಿ, ಮೇಕೆ, 100ಕ್ಕೂ ಅಧಿಕ ಎಮ್ಮೆಗಳ ವಧೆ ಮಾಡಿ, ಅದರ ಮಾಂಸಗಳನ್ನು ಬೇರೆ ಬೇರೆ ಕಡೆ ಸರಬರಾಜು ಮಾಡುವ ಕೇಂದ್ರ ಇದಾಗಿದೆ.‌ ಇದೇ ವೇಳೆ ಟ್ರೇಡ್ ಲೈಸನ್ಸ್ ಇಲ್ಲದ ಚಿಕನ್, ಮಟನ್ ಶಾಪ್​ಗಳ ಕೂಡ ಮುಚ್ಚಿಸಲು ಬಿಬಿಎಂಪಿ ತಯಾರಿ ನಡೆಸಿದೆ.

ಇದನ್ನೂ ಓದಿ:ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ: ಸಿದ್ದರಾಮಯ್ಯ ವಾಗ್ದಾಳಿ

Last Updated : May 2, 2022, 12:04 PM IST

ABOUT THE AUTHOR

...view details