ಬೆಂಗಳೂರು:ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆಗೆ ಒಳಗಾಗಲು ವಿದೇಶಗಳಿಂದ ನಗರಕ್ಕೆ ಬಂದ ಎಲ್ಲ ನಾಗರೀಕರಿಗೆ ನೊಟೀಸ್ ನೀಡಲಾಗುವುದು ಎಂದು ಕೊರೊನಾ ವೈರಸ್ ತಡೆ ಕುರಿತಂತೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಯಾಗಿರುವ ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ನಗರದಲ್ಲಿ ಈವರೆಗೂ 42 ಸಾವಿರ ವಿದೇಶಿಗರು ಬಂದು ಹೋಗಿದ್ದಾರೆ. ಈ ಪೈಕಿ ನಗರದಲ್ಲಿ ವಾಸ್ತವ್ಯ ಹೂಡಿದವರ ಸಂಖ್ಯೆ 30 ಸಾವಿರವಿದೆ. ಇವರಿಗೆ ಕೊರೊನಾ ಸೋಂಕು ಕುರಿತಂತೆ ತಿಳುವಳಿಕೆ ಮೂಡಿಸಿ ಆರೋಗ್ಯ ತಪಾಸಣೆ ಒಳಗಾಗುವಂತೆ ನೊಟೀಸ್ ನೀಡಲಾಗುವುದು. ಇವರು ವಾಸಿಸುತ್ತಿರುವ ನೆರೆಹೊರೆ ಮನೆಯವರಿಗೂ ಹಾಗೂ ವಸತಿ ನಾಗರಿಕ ಕ್ಷೇಮಾಭಿವೃದ್ಧಿ ಸಂಘದವರಿಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.