ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕೆ.ಕೆ ಗೆಸ್ಟ್ ಹೌಸ್ ಬಳಿ ಸಿಬಿಐ ತಂಡ ಬೀಡು ಬಿಟ್ಟಿದೆ. ಇಷ್ಟು ದಿನ ಹಿರಿಯ ಐಪಿಎಸ್ ಹಾಗೂ ಎಸಿಪಿಗಳ ವಿಚಾರಣೆ ನಡೆಸಿ, ಈಗ ಸಿಲಿಕಾನ್ ಸಿಟಿ ಹಾಗೂ ಸಿಸಿಬಿ, ಸೈಬರ್, ಸಿಐಡಿ ಸೇರಿದಂತೆ 40ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಫೋನ್ ಟ್ಯಾಪಿಂಗ್ ಪ್ರಕರಣ: 40ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳ ವಿಚಾರಣೆ ನಡೆಸಲಿರುವ ಸಿಬಿಐ
ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳಿಗೆ ವಿಒಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಅಂಶಗಳು ಇನ್ಸ್ಪೆಕ್ಟರ್ಗಳಿಂದ ಕಲೆ ಹಾಕಲಾಗುತ್ತಿದೆ.
ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧಿಸಿದ ಸಿಬಿಐ ತನಿಖೆ ಚುರುಕು
ಈಚೆಗೆ ಎಸಿಪಿ ರಾಮಚಂದ್ರಪ್ಪ ಅವರನ್ನು ವಿಚಾರಣೆ ನಡೆಸಿದ ಸಿಬಿಐ ಈ ವೇಳೆ ಮಹತ್ವದ ಮಾಹಿತಿ ಪಡೆದುಕೊಂಡಿದೆ. ಹಿರಿಯ ಐಪಿಎಸ್ ಅಧಿಕಾರಿ ಸೂಚನೆ ಮೇರೆಗೆ ಕೆಲ ಠಾಣೆಯ ಇನ್ಸ್ಪೆಕ್ಟರ್ಗಳು ಸಂಬಂಧ ವಿಲ್ಲದ ಕೇಸ್ಗಳಿಗೆ ಎಫ್ಐಆರ್ ಹಾಕಿ ನಂತರ ಫೋನ್ ಟ್ಯಾಪಿಂಗ್ ಮಾಡಿರುವ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗಿದೆ.