ಕರ್ನಾಟಕ

karnataka

ETV Bharat / state

ಬಿಬಿಎಂಪಿ ರೆಫರ್ ಮಾಡಿದ್ರೂ ಸಿಗುತ್ತಿಲ್ಲ ಕೋವಿಡ್​​​​​ ಚಿಕಿತ್ಸೆ: ಸದಸ್ಯರ ಆರೋಪ

ಪ್ರತಿಪಕ್ಷ ನಾಯಕ ವಾಜಿದ್ ಮಾತನಾಡಿ, ಪ್ರತಿ ವಾರ್ಡ್​ನಲ್ಲಿ ಎಷ್ಟೆಷ್ಟು ಕೊರೊನಾ ಪ್ರಕರಣ ಇದೆ ಎಂಬ ಮಾಹಿತಿಯೇ ಇಲ್ಲ. ಇದನ್ನು ತಕ್ಷಣ ಕೊಡಿಸಿ. ನಗರದ 36 ಸಾವಿರ ಕೇಸ್​ಗಳು ಎಲ್ಲಿವೆ, ಎಷ್ಟಿವೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಹೋಂ ಐಸೋಲೇಷನ್ ಮಾಹಿತಿ, ಬಿಡುಗಡೆ ಮಾಹಿತಿಯೂ ಇಲ್ಲ. ಕೋವಿಡ್ ವಾರ್ಡ್​ವಾರು ಮಾಹಿತಿ ಕೊಡಿ ಎಂದರು.

ಪಾಲಿಕೆ ಸದಸ್ಯರ ಆರೋಪ
ಪಾಲಿಕೆ ಸದಸ್ಯರ ಆರೋಪ

By

Published : Aug 4, 2020, 5:37 PM IST

ಬೆಂಗಳೂರು: ಬಿಬಿಎಂಪಿ ರೆಫರ್ ಮಾಡಿದರೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಪ್ರತಿಯೊಬ್ಬರಿಗೂ ಐದು ಲಕ್ಷ, ಎಂಟು ಲಕ್ಷ ಬಿಲ್ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಸಭೆಯಲ್ಲಿ ಸದಸ್ಯರು ಆರೋಪಿಸಿದರು.

ಪಾಲಿಕೆ ಸದಸ್ಯರ ಆರೋಪ

ಪಾಲಿಕೆ ಸದಸ್ಯ ಎಂ.ಶಿವರಾಜು ಮಾತನಾಡಿ, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಲ್ಲಿ 45 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಎಸ್​ಎಸ್​ಎನ್ಎಂ​ಸಿ ಆಸ್ಪತ್ರೆ ಬುಕ್ ಮಾಡಲಾಗಿತ್ತು. ಐಸಿಯು ಬೆಡ್ ಬೇಕು ಎಂದು ದಾಖಲಿಸಲಾಗಿತ್ತು. ಆದರೆ ಅಲ್ಲಿಗೆ ದಾಖಲಾದ ನಂತರ ಅಲ್ಲಿ ಒಂದು ಗಂಟೆ ಕಾಯಿಸಲಾಗಿದೆ. ನಂತರವೂ ವೆಂಟಿಲೇಟರ್ ಬುಕ್ ಮಾಡಿ ಕಳುಹಿಸಿದರೂ ಬಿಬಿಎಂಪಿಯ ರೋಗಿ ಅಂತ ಕಡೆಗಣಿಸಲಾಗುತ್ತಿದೆ. ಊಟ ಸರಿಯಾಗಿ ಇಲ್ಲ. ಯಾವುದೇ ಸೌಲಭ್ಯ ಇಲ್ಲ. ಇದೊಂದೇ ಅಲ್ಲ, ಫೋರ್ಟಿಸ್, ಸುಗುಣ, ಮಲ್ಲಿಗೆ ಆಸ್ಪತ್ರೆಗಳಲ್ಲಿಯೂ ಪಾಲಿಕೆ ರೆಫರ್ ಮಾಡುವ ಕೋವಿಡ್ ಕೇಸ್ ತೆಗೆದುಕೊಳ್ಳುತ್ತಿಲ್ಲ. ಪೌರಕಾರ್ಮಿಕರಿಗೆ ಕೊರೊನಾ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಮಾಡಬೇಕಿದೆ ಎಂದರು.

ರ‍್ಯಾಪಿಡ್‌ ಟೆಸ್ಟ್‌, ಗಂಟಲು ದ್ರವ ಪರೀಕ್ಷೆಗಳಲ್ಲಿ ರಿಸಲ್ಟ್ ವ್ಯತ್ಯಾಸ ಬರುತ್ತಿದೆ ಎಂದು ಶಿವರಾಜು ಆರೋಪಿಸಿದರು. ಇನ್ನೂ ಹಲವು ವಾರ್ಡ್​ನಲ್ಲಿ ಈ ಗೊಂದಲಗಳಾಗಿದ್ದು, ಯಾವ ಟೆಸ್ಟ್​ನ್ನ ನಂಬಬೇಕು ಎಂದು ಪಾಲಿಕೆ ಸದಸ್ಯರು ಪ್ರಶ್ನಿಸಿದರು.

ಸ್ಲಂ ಜನರಿಗೂ ಐದು ಲಕ್ಷ ಬಿಲ್: ಮಾಜಿ ಮೇಯರ್ ಸಂಪತ್ ಕುಮಾರ್ ಮಾತನಾಡಿ, ಬಿಬಿಎಂಪಿಯಿಂದಲೇ ಖಾಸಗಿ ಆಸ್ಪತ್ರೆಗೆ ದಾಖಲಾದ ಸ್ಲಂ ಜನರಿಗೂ ಐದಾರು ಲಕ್ಷ ಬಿಲ್ ಮಾಡುತ್ತಿದ್ದಾರೆ. ಸಾವನ್ನಪ್ಪಿದರೂ ಹಣ ಕಲೆಕ್ಟ್ ಮಾಡುತ್ತಿದ್ದಾರೆ. ಬಿಯು ನಂಬರ್ ಇದ್ರೂ ಹಣ ಕಲೆಕ್ಟ್ ಮಾಡುತ್ತಾರೆ. ಲೈಫ್ ಸೇವಿಂಗ್ ಡ್ರಗ್, ಈ ಒಂದು ಇಂಜಕ್ಷನ್ ಎಲ್ಲಿಯೂ ಸಿಗುತ್ತಿಲ್ಲ. ನಗರದಲ್ಲಿ ಇದರ ಕೊರತೆ ಇದ್ದು, ಸರಿಯಾದ ವ್ಯವಸ್ಥೆ ಮಾಡಿಸಬೇಕು ಎಂದು ಗಮನ ಸೆಳೆದರು.

ಕೋವಿಡ್ ವಾರ್ಡ್​ವಾರು ಮಾಹಿತಿ ಕೊಡಿ: ಪ್ರತಿಪಕ್ಷ ನಾಯಕ ವಾಜಿದ್ ಮಾತನಾಡಿ, ಪ್ರತಿ ವಾರ್ಡ್​ನಲ್ಲಿ ಎಷ್ಟೆಷ್ಟು ಕೊರೊನಾ ಪ್ರಕರಣ ಇದೆ ಎಂಬ ಮಾಹಿತಿಯೇ ಇಲ್ಲ. ಇದನ್ನು ತಕ್ಷಣ ಕೊಡಿಸಿ. ನಗರದ 36 ಸಾವಿರ ಕೇಸ್​ಗಳು ಎಲ್ಲಿವೆ, ಎಷ್ಟಿವೆ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಹೋಂ ಐಸೋಲೇಷನ್ ಮಾಹಿತಿ, ಬಿಡುಗಡೆ ಮಾಹಿತಿಯೂ ಇಲ್ಲ. ಕೋವಿಡ್ ವಾರ್ಡ್​ವಾರು ಮಾಹಿತಿ ಕೊಡಿ ಎಂದರು.

ನಿಯಮ ಮೀರುವ ಖಾಸಗಿ ಆಸ್ಪತ್ರೆಗಳ ರಿಜಿಸ್ಟ್ರೇಶನ್ ರದ್ದು: ಖಾಸಗಿ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಈಗಾಗಲೇ ವಿಕ್ಟೋರಿಯಾ, ಸಿ.ವಿ.ರಾಮನ್ ನಗರ ಆಸ್ಪತ್ರೆಗೆ ವಿಸಿಟ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಾದ ಸಾಕ್ರಾ, ವೈದೇಹಿ, ಕೊಲಂಬಿಯಾ ಆಸ್ಪತ್ರೆಗಳಿಗೂ ಭೇಟಿ ನೀಡಲಾಗಿದೆ. ಜೂನ್ 23ರ ಆದೇಶದಂತೆ ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚೆ ಮಾಡಿ, ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆಯನ್ನು ಕೋವಿಡ್ ರೋಗಿಗಳಿಗೆ ಸರ್ಕಾರಿ ಕೋಟಾಕ್ಕೆ ಮೀಸಲಿಡಬೇಕು. ನಾಲ್ಕು ತರಹದ ಬೆಡ್ ವ್ಯವಸ್ಥೆ ಇದ್ದು, ಸರ್ಕಾರ ನಿಗದಿ ಮಾಡಿದ ಶುಲ್ಕ ವಿಧಿಸಬೇಕು. ಉಳಿದ ಸಂಪೂರ್ಣ ವೆಚ್ಚವನ್ನು ಸುವರ್ಣ ಆರೋಗ್ಯ ಟ್ರಸ್ಟ್ ಅಡಿಯಲ್ಲಿ, ಆಯುಷ್ಮಾನ್ ಭಾರತ್ ಯೋಜನೆಯಡಿ ಸರ್ಕಾರವೇ ಭರಿಸುತ್ತದೆ. ಹೀಗಿದ್ದೂ ಹಾಸಿಗೆ ಸೌಲಭ್ಯ ಕೊಡದೆ, ಹೆಚ್ಚುವರಿ ಬಿಲ್ ಮಾಡುವ ಆಸ್ಪತ್ರೆಗಳ ರಿಜಿಸ್ಟ್ರೇಶನ್ ತೆಗೆದು ಹಾಕುವ ಅಧಿಕಾರ ಈಗ ಪಾಲಿಕೆ ಆಯುಕ್ತರಿಗೆ ಇದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ವಾರ 27,468 ಜನಕ್ಕೆ ಟೆಸ್ಟ್ ಮಾಡಿದಾಗ ಶೇಕಡಾ ಹತ್ತರಷ್ಟು ಮಂದಿಗೆ ಪಾಸಿಟಿವ್ ಬಂದಿದೆ. ಪ್ರತಿದಿನ ಹತ್ತು ಸಾವಿರ ಟೆಸ್ಟಿಂಗ್ ನಡೆಯುತ್ತಿದ್ದು, ಇದನ್ನು ಇಪ್ಪತ್ತು ಸಾವಿರ ಮಾಡುವ ಗುರಿ ಇದೆ. 4,464 ಪೌರಕಾರ್ಮಿಕರಿಗೆ ಟೆಸ್ಟ್ ಮಾಡಲಾಗಿತ್ತು. 359 ಸೂಪರ್ ವೈಸರ್, 15 ಡ್ರೈವರ್​​ಗಳಿಗೂ ಮಾಡಲಾಗಿದೆ. ಒಟ್ಟು ಐದು ಸಾವಿರ ಪೌರಕಾರ್ಮಿಕರಲ್ಲಿ 156 ಜನರಿಗೆ ಪಾಸಿಟಿವ್ ಬಂದಿದೆ. ಪೌರಕಾರ್ಮಿಕರ ಆರೋಗ್ಯ ಜವಾಬ್ದಾರಿ ನಮ್ಮದು. ಹೀಗಾಗಿ ಪಾಲಿಕೆ ಕಡೆಯಿಂದ ಹೊಸ ಆಸ್ಪತ್ರೆ ಉದ್ಘಾಟಿಸಲಾಗುತ್ತಿದ್ದು, ಇನ್ಫೋಸಿಸ್ ವ್ಯವಸ್ಥೆ ನೀಡುತ್ತಿದೆ. ಅಧಿಕಾರಿ, ಪೌರಕಾರ್ಮಿಕರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಯು ನಂಬರ್ ಸಿಗದಿದ್ದರೂ ಎಸ್​ಆರ್​ಎಫ್​ ನಂಬರ್​ಗೆ ಬೆಡ್ ವ್ಯವಸ್ಥೆ: ಕೋವಿಡ್ ಟೆಸ್ಟ್ ಬಳಿಕ ಪಾಸಿಟಿವ್ ಬಂದರೆ ಬಿಯು ನಂಬರ್ ಸಿಗುತ್ತಿದೆ. ಆಗ ಆಯಾ ವಲಯದಿಂದ ಬೆಡ್ ಅಲೋಕೇಶನ್ ನಡೆಯುತ್ತಿದೆ. ಆದರೆ ಬಿಯು ನಂಬರ್ ಸಿಗದಿದ್ದರೆ, ವರದಿ ತಡವಾಗಿ ಬಂದಿದ್ದರೆ ಕೋವಿಡ್​ ಇಲ್ಲದ್ದರೂ ಉಸಿರಾಟ ಸಮಸ್ಯೆ ಇದ್ದರೆ ತಕ್ಷಣ 108ಕ್ಕೆ ಕರೆ ಮಾಡಿ, ಬೆಡ್ ವ್ಯವಸ್ಥೆ ಪಡೆದುಕೊಳ್ಳಬೇಕು. ಟೆಸ್ಟ್ ಮಾಡಿದಾಗ ಕೊಡುವ ಎಸ್​ಆರ್​ಎಫ್ ನಂಬರ್ ಇದ್ದರೂ, ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ವಲಯ ಮಟ್ಟದಲ್ಲಿ ಬದಲಾವಣೆ ಮಾಡಲಾಗಿದೆ ಎಂದರು.

ABOUT THE AUTHOR

...view details