ಕರ್ನಾಟಕ

karnataka

ETV Bharat / state

ರಾಷ್ಟ್ರಗೀತೆ ಹಾಡೋದನ್ನು ಪ್ರಮೋದ್ ಮುತಾಲಿಕ್​​ನಿಂದ ಕಲಿಬೇಕಿಲ್ಲ: ಜಮೀರ್ ತಿರುಗೇಟು - ಪ್ರಮೋದ್​ ಮುತಾಲಿಕ್​ಗೆ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು

ಮುತಾಲಿಕ್​ನಿಂದ ನಾವೇನ್ ರಾಷ್ಟ್ರಗೀತೆ ಹಾಡೋದನ್ನು ಕಲಿಯಬೇಕಿಲ್ಲ. ರಾಷ್ಟ್ರಗೀತೆಯನ್ನು ಉರ್ದು ಶಾಲೆಯಲ್ಲೂ ಹಾಡಲಾಗುತ್ತಿದೆ. ನಾವು ಈ ಹಿಂದಿನಿಂದಲೂ ಹಾಡಿಕೊಂಡು ಬರ್ತಾ ಇದ್ದೇವೆ. ಆದ್ರೆ ಬೇಕಂತಲೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಅನ್ನುವ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

Opening of New Building of Government Urdu School at Pension Mohalla
ಜಮೀರ್ ತಿರುಗೇಟು

By

Published : May 16, 2022, 7:37 PM IST

ಬೆಂಗಳೂರು: ಉರ್ದು ಶಾಲೆಯಲ್ಲಿ ಈ ಹಿಂದಿನಿಂದಲೂ ರಾಷ್ಟ್ರಗೀತೆ ಹಾಡುತ್ತಾ ಬರಲಾಗುತ್ತಿದೆ. ರಾಷ್ಟ್ರಗೀತೆ ಹಾಡುತ್ತಿಲ್ಲಾ ಎಂಬುದು ಸುಳ್ಳು ಆರೋಪ. ಇದೆಲ್ಲಾ ಬರೀ ರಾಜಕೀಯ ಗಿಮಿಕ್. ಮುತಾಲಿಕ್​ನಿಂದ ನಾವೇನ್ ರಾಷ್ಟ್ರಗೀತೆ ಹಾಡೋದನ್ನು ಕಲಿಯಬೇಕಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಖಾನ್

ಸೋಮವಾರ ಪೆನ್ಷನ್ ಮೊಹಲ್ಲಾದಲ್ಲಿನ ಸರ್ಕಾರಿ ಉರ್ದು ಶಾಲೆಯ ನೂತನ ಕಟ್ಟಡ ಉದ್ಘಾಟನೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೆನ್ಷನ್ ಮೊಹಲ್ಲಾದಲ್ಲಿನ ಸರ್ಕಾರಿ ಉರ್ದು ಶಾಲೆಗೆ ಮಕ್ಕಳು ಬರೋದೆ ಕಷ್ಟವಾಗಿತ್ತು. ಯಾಕೆಂದ್ರೆ ಆ ಶಾಲೆ ಬಹಳ ಹಾಳಾಗಿತ್ತು. ಸ್ವಚ್ಛತೆ ಸೇರಿದಂತೆ ವಿವಿಧ ಸೌಕರ್ಯಗಳ ಕೊರತೆ ಕೂಡ ಇತ್ತು. ಐದಾರು ತಿಂಗಳ ಹಿಂದೆ ನಾನು ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೆ. ₹50 ಲಕ್ಷ ಶಾಸಕರ ಅನುದಾನದಲ್ಲಿ ಹೊಸ ಕಟ್ಟಡ ರೆಡಿ ಮಾಡಿ, ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಪುಸ್ತಕ ಪಡೆಯಲು ಬಂದ ಕನ್ನಡಕ ಧರಿಸಿದ್ದ ವಿದ್ಯಾರ್ಥಿಯ ಸಮಸ್ಯೆ ಆಲಿಸಿದ ಸಿಎಂ

ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡೋದಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರಗೀತೆಯನ್ನು ಉರ್ದು ಶಾಲೆಯಲ್ಲಿ ಹಾಡಲಾಗುತ್ತಿದೆ. ನಾವು ಈ ಹಿಂದಿನಿಂದಲೂ ಹಾಡಿಕೊಂಡು ಬರ್ತಾ ಇದ್ದೇವೆ. ಆದ್ರೇ ಬೇಕಂತಲೇ ಉರ್ದು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿಲ್ಲ ಎನ್ನೋ ವಿವಾದ ಸೃಷ್ಟಿಸಲಾಗುತ್ತಿದೆ. ಏನ್ ನಮಗೆ ಮುತಾಲಿಕ್ ರಾಷ್ಟ್ರಗೀತೆ ಹಾಡೋದನ್ನುಹೇಳಿಕೊಡಬೇಕಾ.? ಇದೆಲ್ಲಾ ಮುಂಬರುವ ವಿಧಾನಸಭಾ ಚುನಾವಣೆಯ ಗಿಮಿಕ್ ಅಷ್ಟೇ. ಈಗ ಅದನ್ನೆಲ್ಲಾ ನಾ ಮಾತನಾಡೋದಿಲ್ಲ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details