ಬೆಂಗಳೂರು: ಎಸ್ಕಾಂಗಳ ದುಃಸ್ಥಿತಿ ಸಿದ್ದರಾಮಯ್ಯ ಅವರ ಪಾಪದ ಕೂಸಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2013-2019 ತನಕ ಅವರೇ ಆರ್ಥಿಕ ಸಚಿವರಾಗಿದ್ದರು. ಅವರು ಇದ್ದಾಗ ರಾಜ್ಯದ ಮೇಲೆ 1ಲಕ್ಷ ಕೋಟಿಗೂ ಹೆಚ್ಚು ಹೊರೆ ಹಾಕಿದ್ದಾರೆ. 5 ವರೇ ಸಾವಿರ ಕೋಟಿ ಇಲಾಖೆ ಮೇಲೆ ಹೊರೆ ಹೊರೆಸಿದ್ದರು. ಐಪಿ ಸೆಟ್‌ಗೆ, ವಿದ್ಯುತ್ಗೆ ಸಬ್ಸಿಡಿ ರೂಪದಲ್ಲಿ 3,471 ಕೋಟಿ ರೂ. ಬಾಕಿ ಉಳಿಸಿದ್ದರು.
ಆರ್ಥಿಕ ಇಲಾಖೆ ಆ ಹಣವನ್ನು ಇಂಧನ ಇಲಾಖೆಗೆ ಕೊಟ್ಟೇ ಇಲ್ಲ. ಇದನ್ನು ಅರಿತ ಸಿಎಂ ಬೊಮ್ಮಾಯಿ 8,064 ಕೋಟಿ ರೂ. ನಮ್ಮ ಇಲಾಖೆಗೆ ಕೊಟ್ಟರು. ಅದರಿಂದ ಹಿಂದಿನ ಸಾಲದ ಹೊರೆಯನ್ನು ಸರಿ ದೂಗಿಸಿದೆವು. ಅವತ್ತು ಇಲಾಖೆಗೆ ಸಿದ್ದರಾಮಯ್ಯ ಹೇರಿದ ಪಾಪದ ಕೂಸನ್ನು ನಾವು ಈಗ ಸರಿ ದೂಗಿಸುತ್ತಿದ್ದೇವೆ.
ಸಿದ್ದರಾಮಯ್ಯ ಸುಳ್ಳನ್ನೇವಿಜೃಂಭಿಸುತ್ತಿದ್ದಾರೆ:ಎಸ್ಸಿ,ಎಸ್ಟಿ ಸಮುದಾಯದವರಿಗೆ ಅಮೃತ್ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೇ, ಈ ಬಗ್ಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸುಳ್ಳುನ್ನು ವಿಜೃಂಭಿಸುತ್ತಿದ್ದಾರೆ. ಇದು ಬಿಜೆಪಿಯ ಬದ್ಧತೆಯ ಯೋಜನೆ. ಅದನ್ನು ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆಯಿಂದ 39 ಲಕ್ಷ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ. 4 ಲಕ್ಷ ಪಲಾನುಭವಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. 15,000 ಫಲಾನುಭವಿಗಳಿಗೆ ಡಿಟಿಪಿ ಮೂಲಕ ಹಣ ಜಮೆ ಮಾಡಲಾಗಿದೆ ಎಂದರು