ಕರ್ನಾಟಕ

karnataka

ETV Bharat / state

ಸುಖಾಸುಮ್ಮನೆ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಆರೋಗ್ಯ ಇಲಾಖೆ ಆಯುಕ್ತ - ಕೊರೊನಾ ಮುನ್ನೆಚ್ಚರಿಕೆ

ಅನೇಕ ಡಿಪಾರ್ಟಮೆಂಟಲ್ ಸ್ಟೋರ್ ಅಂಗಡಿಗಳ ಸಂಸ್ಥೆಗಳು ಮಾಸ್ಕ್ ಗಳನ್ನು ಧರಿಸಲು ಜನರನ್ನು ಒತ್ತಾಯಿಸುತ್ತಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ, ಆದರೆ ಯಾರೂ ಸುಖಾಸುಮ್ಮನೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

not-everyone-need-to-wear-mask-commissioner-pankaj-kumar-pandey
ಸುಖಾಸುಮ್ಮನೆ ಮಾಸ್ಕ್ ಧರಿಸುವ ಅಗತ್ಯವಿಲ್ಲ

By

Published : Mar 31, 2020, 3:10 PM IST

ಬೆಂಗಳೂರು: ಮಾಸ್ಕ್ ಗಳನ್ನ ಯಾರು ಧರಿಸಬೇಕು ಎಂಬ ವಿಷಯದ ಬಗ್ಗೆ ವಿವಿಧ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ. ಕೆಮ್ಮು, ಕಫ, ಜ್ವರ ಇದ್ದರೆ ಅಷ್ಟೇ ಮಾಸ್ಕ್ ಧರಿಸಿ, ಅನಾವಶ್ಯಕ ಮಾಸ್ಕ್ ಧರಿಸದಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಸುಖಾಸುಮ್ಮನೆ ಮಾಸ್ಕ್ ಧರಿಸುವ ಅಗತ್ಯವಿಲ್ಲ

ಈಗಾಗಲೇ ಇಲಾಖೆಯಿಂದ ಯಾರು ಮಾಸ್ಕ್ ಧರಿಸಬೇಕು- ಧರಿಸಬಾರದು ಎಂಬುದನ್ನ ಸೃಷ್ಟಪಡಿಸಿದೆ. ಕೋವಿಡ್-19 ಶಂಕಿತರು, ಹೆಲ್ತ್ ವರ್ಕ್​ಸ್​ ಮಾತ್ರ ಮಾಸ್ಕ್ ಧರಿಸಬೇಕು. N-95 ಮಾಸ್ಕ್ ಅನ್ನ ಸಾಮಾನ್ಯರು ಬಳಸುವ ಅಗತ್ಯ ವಿಲ್ಲ. ಶಂಕಿತರು, ಸೋಂಕಿತರು ,ಚಿಕಿತ್ಸೆಗೆ ಒಳಪಡುವವರು ಮಾತ್ರ-N95 ಮಾಸ್ಕ್ ಧರಿಸಿ. ಇತರರು ಮಾಸ್ಕ್ ಧರಿಸಲೇ ಬೇಕಂದರೆ ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿ ಎಂದು ಆಯುಕ್ತರಿಂದ ಸಲಹೆ ನೀಡಿದ್ದಾರೆ.

ABOUT THE AUTHOR

...view details