ಕರ್ನಾಟಕ

karnataka

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ರೆ ಹುಷಾರ್​... ರೌಡಿಗಳಿಗೆ ಚಳಿ ಬಿಡಿಸಿದ್ರು ಡಿಸಿಪಿ ಶಶಿಕುಮಾರ್​

By

Published : Aug 8, 2019, 8:24 PM IST

ಉತ್ತರ ವಿಭಾಗದ ರೌಡಿಗಳಿಗೆ ಪರೇಡ್ ನಡೆಸಿದ ಡಿಸಿಪಿ ಶಶಿಕಕುಮಾರ್, ಒಟ್ಟು 781 ಜನ ರೌಡಿ ಶೀಟರ್​ಗಳನ್ನ ಕರೆಸಿ, ಚಳಿ ಬಿಡಿಸಿದ್ರು. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ರೆ ಗೂಂಡಾ ಕಾಯ್ದೆ, ಸಿಆರ್​ಪಿಸಿ ಸೆಕ್ಷನ್ 110 ಹಾಕುವುದಾಗಿ ಎಚ್ಚರಿಕೆ ನೀಡಿದ್ರು.

ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್

ಬೆಂಗಳೂರು: ಉತ್ತರ ವಿಭಾಗದ ರೌಡಿಗಳಿಗೆ ಇಂದು ಪರೇಡ್ ನಡೆಸಿದ ಡಿಸಿಪಿ ಶಶಿಕಕುಮಾರ್ ಫುಲ್ ಕ್ಲಾಸ್ ತೆಗೆದುಕೊಂಡರು. ಒಟ್ಟು 781 ಜನ ರೌಡಿ ಶೀಟರ್​ಗಳನ್ನ ಕರೆಸಿ, ಅಕ್ರಮ ಚಟುವಟಿಕೆ ನಡೆಸಿದ್ರೆ ಗೂಂಡಾ ಕಾಯ್ದೆ, ಸಿಆರ್​ಪಿಸಿ ಸೆಕ್ಷನ್ 110 ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್

ನೂತನ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರೌಡಿಗಳ‌ ಮೇಲೆ ನಿಗಾವಹಿಸುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಮೈದಾನದಲ್ಲಿ ಇಂದು ರೌಡಿ ಪರೇಡ್ ನಡೆಸಲಾಯ್ತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಶಶಿಕುಮಾರ್ ಬಕ್ರಿದ್, ವರಮಹಾಲಕ್ಷ್ಮಿ ಹಾಗೂ 15ರಂದು ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಹಿನ್ನೆಲೆ ಉತ್ತರ ವಿಭಾಗ 781 ರೌಡಿಗಳ ಪರೇಡ್ ನಡೆಸಲಾಗಿದೆ. ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಅನೇಕ ವಿಚಾರಗಳ ಕುರಿತು ವಿಚಾರಿಸಲು ರೌಡಿಶೀಟರ್​ಳನ್ನ ಕರೆ ತರಲಾಗಿದೆ.

ಸನ್ನಡತೆ ಆಧಾರದ ಮೇಲೆ ಕೆಲವು ರೌಡಿಶೀಟರ್ಸ್ ಪಟ್ಟಿಯಿಂದ ಕೈಬಿಡಲು ವರದಿ ಒಪ್ಪಿಸಿದ್ದೇವೆ. ಇಲ್ಲಿ ಬಂದವರ ವೇಷಭೂಷಣ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿದ್ದು, ಕರೆದು ಬುದ್ಧಿವಾದ ಹೇಳಿದ್ದೇವೆ ಎಂದರು.ಹಾಗೆ ರೌಡಿಗಳಿಂದ ಸಾರ್ವಜನಿಕರಿಗೆ ತೊಂದರೆ‌ಯಾಗದ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮುಂಜಾಗೃತ ಕ್ರಮವಾಗಿ ರೌಡಿಶೀಟರ್ಸ್ ಗಳಿಂದ ಮುಂದೆ ತಪ್ಪಾಗದಂತೆ ಸಹಿ ಹಾಕಿಸಿಕೊಳ್ಳಲಾಗಿದೆ. ಕೆಲವರ ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತೆ. ಒಂದು ವೇಳೆ ರೌಡಿ ಚಟುವಟಿಕೆ ಕಂಡು ಬಂದ್ರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಮಾಹಿತಿ ನೀಡಿದ್ರು.

ABOUT THE AUTHOR

...view details