ಬೆಂಗಳೂರು: ಯುಗಾದಿ ಹಬ್ಬದ ಮರುದಿನ ಮಾಂಸಾಹಾರಿಗಳ ಪಾಲಿಗೆ ಅತ್ಯಂತ ಸಂಭ್ರಮದ ದಿನ ಎಂದೇ ಕರೆಸಿಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಹೊಸತೊಡಕು ಆಚರಣೆಗೆ ಮಾಂಸದೂಟ ಕಡ್ಡಾಯವಾಗಿರುತ್ತದೆ. ಆದರೆ, ಈ ಬಾರಿ ಕೊರೊನಾ ಹಾವಳಿಯಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಚಿಕನ್, ಮಟನ್ ಭಾರಿ ದುಬಾರಿ: ಉಳ್ಳವರಿಗಷ್ಟೇ ಹೊಸತೊಡಕು
ಯುಗಾದಿ ಹಬ್ಬದ ಮರುದಿನ ಮಾಂಸಾಹಾರಿಗಳ ಪಾಲಿಗೆ ಅತ್ಯಂತ ಸಂಭ್ರಮದ ದಿನ ಎಂದೇ ಕರೆಸಿಕೊಳ್ಳುತ್ತದೆ. ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಹೊಸತೊಡಕು ಆಚರಣೆಗೆ ಮಾಂಸದೂಟ ಕಡ್ಡಾಯವಾಗಿರುತ್ತದೆ. ಆದರೆ, ಈ ಬಾರಿ ಕೊರೊನಾ ಹಾವಳಿಯಿಂದ ಮಾರುಕಟ್ಟೆ ದರಗಳಲ್ಲಿ ಏರಿಕೆಯಾಗಿದೆ.
ವರ್ಷಕ್ಕೊಮ್ಮೆ ಆಚರಿಸಲಾಗುವ ನಾನ್ ವೆಜ್ ಪ್ರಿಯರ ಆಚರಣೆ ಇಂದು ಮಹಾನಗರದಲ್ಲಿ ಅತ್ಯಂತ ನಿರಾತಂಕವಾಗಿ ನೆರವೇರಿತು. ಸಾಮಾನ್ಯವಾಗಿ ಈ ಹಬ್ಬದ ಸಂದರ್ಭದಲ್ಲಿ ಕುರಿ ಹಾಗೂ ಕೋಳಿ ಮಾಂಸಗಳ ಬೆಲೆ ಏರಿಕೆಯಾಗುವುದು ಸಹಜ. ಆದರೆ, ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಮಾಂಸದ ಬೆಲೆ ಹೆಚ್ಚಾಗಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ನಿರಾಸೆಗೊಂಡಿದ್ದಾರೆ.
ನಗರ ಕೇಂದ್ರ ಭಾಗದ ಮಾರುಕಟ್ಟೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಳಗ್ಗೆಯೇ ಜನ ಮಾಂಸ ಖರೀದಿಸಿದರು. ನಗರದ ಹೊರವಲಯದಲ್ಲಿ ಬೆಲೆ ಏರಿಕೆಯ ಮಧ್ಯೆಯೂ ಕೆಲ ಸಣ್ಣಪುಟ್ಟ ಪ್ರದೇಶಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಖರೀದಿ ಭರಾಟೆ ಜೋರಾಗಿತ್ತು.