ಬೆಂಗಳೂರು:ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಗುರುವಾರ ಒಟ್ಟು 17 ನಾಮಪತ್ರ ಸಲ್ಲಿಕೆ ಆಗಿವೆ.
ಇದುವರೆಗೂ ಕಾಂಗ್ರೆಸ್ನಿಂದ 19, ಉತ್ತಮ ಪ್ರಜಾಕೀಯ ಪಕ್ಷದಿಂದ 6, ಜೆಡಿಎಸ್ನಿಂದ 1, ಬಿಜೆಪಿಯಿಂದ 4, ಕಮ್ಯುನಿಸ್ಟ್ನಿಂದ 2, ರಿಪಬ್ಲಿಕ್ ಸೇನಾಪಕ್ಷದಿಂದ 1, ಹಿಂದೂಸ್ತಾನ ಜನತಾ ಪಕ್ಷದಿಂದ 2, ಬಹುಜನ ಸಮಾಜ ಪಕ್ಷದಿಂದ 1, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ 2, ಕರ್ನಾಟಕ ರಾಷ್ಟ್ರೀಯ ಸಮಿತಿಯಿಂದ 4 ಸೇರಿದಂತೆ ಒಟ್ಟು 60 ಅಭ್ಯರ್ಥಿಗಳಿಂದ 70 ನಾಮಪತ್ರಗಳು ಸಲ್ಲಿಕೆ ಆಗಿವೆ.
ಕ್ಷೇತ್ರವಾರು ಉಮೇದುವಾರಿಕೆ ಸಲ್ಲಿಕೆ ಗಮನಿಸಿದರೆ ಅಥಣಿಯಿಂದ 6 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗಿದೆ. ಉಳಿದಂತೆ ಕಾಗವಾಡದಲ್ಲಿ 5, ಗೋಕಾಕ್ನಲ್ಲಿ 7, ಯಲ್ಲಾಪುರದಲ್ಲಿ 5, ಹಿರೇಕೆರೂರಿನಲ್ಲಿ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ರಾಣೆಬೆನ್ನೂರಿನಲ್ಲಿ 2, ವಿಜಯನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 2, ಯಶವಂತಪುರದಲ್ಲಿ 5, ಕೆ.ಆರ್. ಪುರದಲ್ಲಿ 7, ಮಹಾಲಕ್ಷ್ಮೀ ಲೇಔಟ್ನಲ್ಲಿ 1 ಹಾಗೂ ಹೊಸಕೋಟೆಯಲ್ಲಿ 4 ನಾಮಪತ್ರ ಸಲ್ಲಿಕೆಯಾಗಿವೆ. ಶಿವಾಜಿನಗರದಲ್ಲಿ 4, ಕೃಷ್ಣರಾಜಪೇಟೆಯಲ್ಲಿ 2 ಹಾಗೂ ಹುಣಸೂರಿನಲ್ಲಿ 5 ನಾಮಪತ್ರ ಸಲ್ಲಿಕೆ ಆಗಿವೆ.
ಕಾಂಗ್ರೆಸ್ನ 19 ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದು ಅಥಣಿಯಲ್ಲಿ 4, ಕಾಗವಾಡದಲ್ಲಿ 5, ಗೋಕಾಕ್ನಲ್ಲಿ 1, ಯಲ್ಲಾಪುರದಲ್ಲಿ 3, ವಿಜಯನಗರದಲ್ಲಿ 2, ಚಿಕ್ಕಬಳ್ಳಾಪುರ ಹಾಗೂ ಕೃಷ್ಣರಾಜಪೇಟೆಯಲ್ಲಿ ತಲಾ 1 ಹಾಗೂ ಹುಣಸೂರಿನಲ್ಲಿ 2 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದಯಶವಂತಪುರದಲ್ಲಿ 1, ಗೋಕಾಕ್ನಲ್ಲಿ 1 ಹಾಗೂ ಹೊಸಕೋಟೆಯಲ್ಲಿ 2 ನಾಮಪತ್ರ ಸಲ್ಲಿಕೆಯಾಗಿದೆ.
ಇನ್ನು ರಾಜ್ಯದ 15 ಕ್ಷೇತ್ರಗಳ ಪೈಕಿ ಬೆಳಗಾವಿಯ ಮೂರು ಕ್ಷೇತ್ರಗಳಾದ ಅಥಣಿ, ಕಾಗವಾಡ ಹಾಗೂ ಗೋಕಾಕ್ನಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅದೇ ರೀತಿ ಹಾವೇರಿಯ ಹಿರೇಕೆರೂರು, ಬೆಂಗಳೂರು ನಗರದ ಯಶವಂತಪುರದಲ್ಲಿ ಕೂಡ ನಾಮಪತ್ರ ಸಲ್ಲಿಕೆಯಾಗಿಲ್ಲ.