ಕರ್ನಾಟಕ

karnataka

ETV Bharat / state

ಉಪಚುನಾವಣೆ ಕಣದಲ್ಲಿದ್ದಾರೆ 165 ಅಭ್ಯರ್ಥಿಗಳು: ಸಂಜೀವ್ ಕುಮಾರ್ ಘೋಷಣೆ

ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿ ಉಪಚುನಾವಣೆಯ ಅಂತಿಮ ಹಂತದಲ್ಲಿರುವ ಒಟ್ಟು ಸ್ಪರ್ಧಾಳುಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

By

Published : Nov 21, 2019, 7:31 PM IST

Updated : Nov 21, 2019, 8:33 PM IST

ಬೆಂಗಳೂರು:ನಾಮಪತ್ರ ಸಲ್ಲಿಕೆ ಮಾಡಿದ್ದ 218 ಅಭ್ಯರ್ಥಿಗಳಲ್ಲಿ 53 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಒಟ್ಟು 165 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 13 ಮಹಿಳೆಯರು ಸೇರಿ ಒಟ್ಟು 218 ನಾಮಪತ್ರ ಸಲ್ಲಿಕೆಯಾಗಿದ್ದವು ಅದರಲ್ಲಿ ಶಿವಾಜಿನಗರದಲ್ಲಿ ಅತಿ ಹೆಚ್ಚು ಅಂದರೆ 26 ನಾಮಪತ್ರ ಸಲ್ಲಿಕೆಯಾಗಿದ್ದವು. ಇಂದು 53 ವಾಪಸ್ ಪಡೆದಿದ್ದು, 9 ಮಹಿಳೆಯರು‌ ಸೇರಿ 165 ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ ಎಂದರು.

ಶಿವಾಜಿನಗರದಲ್ಲಿ 19 ಮತ್ತು ಹೊಸಕೋಟೆಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು ಹೆಚ್ಚಿನ‌ ಅಭ್ಯರ್ಥಿಗಳು ಕಣದಲ್ಲಿ ‌ಇರುವ ಕ್ಷೇತ್ರಗಳಾಗಿವೆ. 15 ಹೆಸರುಗಳು ಮಾತ್ರ ಒಂದು ಯಂತ್ರದಲ್ಲಿ ಬರಲಿವೆ ಹಾಗಾಗಿ ಶಿವಾಜಿನಗರ ಮತ್ತು ಹೊಸಕೋಟೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಬಳಕೆ‌ ಮಾಡಲಾಗುತ್ತದೆ ಉಳಿದ ಕಡೆ 15ಕ್ಕಿಂತ ಕಡಿಮೆ ಇದ್ದು ಒಂದೇ ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ ಎಂದರು.

ವೋಟರ್ ಐಡಿ ಇನ್ನು ಸ್ಮಾರ್ಟ್ ಕಾರ್ಡ್ :ಹೊಸದಾಗಿ ಕಲರ್ ಮತದಾನದ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ರೀತಿಯ ವೋಟರ್ ಐಡಿ ನೀಡಲು ಆರಂಭಿಸಿದ್ದೇವೆ. ಬಾರ್ ಕೋಡ್​ನೊಂದಿಗೆ ಮತದಾರರ ವಿವರ ಇದರಲ್ಲಿ ಇರಲಿದೆ. ಹೊಸ ಮತದಾರರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಮತ್ತೊಂದು ಕಾರ್ಡ್ ಬೇಕು ಎಂದರೆ 30 ರೂಪಾಯಿ ಶುಲ್ಕ ಪಡೆದು ನೀಡಲಾಗುತ್ತದೆ ಎಂದರು.

ಎಂ.3 ಇವಿಎಂಗಳನ್ನು ಬಳಕೆ ಮಾಡಲಾಗುತ್ತದೆ, ಅಭ್ಯರ್ಥಿಗಳ ಹೆಸರು ಹಾಕಿ ಎಲ್ಲವನ್ನೂ ಕ್ಷೇತ್ರಗಳಿಗೆ ಕಳಿಸಿಕೊಡಲಾಗುತ್ತದೆ ಎಂದರು.

ಕ್ರಿಮಿನಲ್ ಹಿನ್ನಲೆಯಲ್ಲಿ ಇರುವ ಅಭ್ಯರ್ಥಿಗಳು ತಮ್ಮ ಪ್ರಕರಣಗಳ ಬಗ್ಗೆ ಮೂರು ಪ್ರಮುಖ ದಿನಪತ್ರಿಕೆ ಹಾಗು ಸುದ್ದಿ ವಾಹನಿಗಳಲ್ಲಿ ಜಾಹೀರಾತು ನೀಡಬೇಕು ಎನ್ನುವುದನ್ನು ಕಳೆದ ಚುನಾವಣೆಯಲ್ಲಿ ಪರಿಚಯಿಸಿದ್ದು, ಈ ಬಾರಿಯೂ ಅದನ್ನು ಮುಂದುವರಿಕೆ ಮಾಡಲಾಗುತ್ತದೆ. ಹಾಗಾಗಿ ಅಭ್ಯರ್ಥಿಗಳು ತಮ್ಮ ಪ್ರಕರಣಗಳ ಬಗ್ಗೆ ಜಾಹೀರಾತು ನೀಡಬೇಕು ಎಂದರು.

Last Updated : Nov 21, 2019, 8:33 PM IST

ABOUT THE AUTHOR

...view details