ಬೆಂಗಳೂರು: ದಿನೇ ದಿನೆ ನಗರದ ಶಬ್ಧ ಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೌದು, ದೇಶದಲ್ಲೇ ಅತಿ ಹೆಚ್ಚು ಶಬ್ಧ ಮಾಲಿನ್ಯವಿರುವ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದಾಗಿದ್ದು, ಕಳೆದ ವರ್ಷ ನಿಗದಿತ ಮಟ್ಟ ಮೀರಿ ಅಧಿಕ ಪ್ರಮಾಣದಲ್ಲಿ ಶಬ್ಧಮಾಲಿನ್ಯ ದಾಖಲಾಗಿದೆ. ನಗರದಲ್ಲಿ ಶಬ್ಧಮಾಲಿನ್ಯವನ್ನು ನಿರಂತರವಾಗಿ ಮಾನಿಟರ್ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಿದೆಯಾದರೂ ಯಾವುದೇ ಪರಿಣಾಮ ಬೀರಿಲ್ಲ.
ನಗರದ ವಾಣಿಜ್ಯ, ವಸತಿ ಹಾಗೂ ಸೂಕ್ಷ್ಮ ಪ್ರದೇಶಗಳಿಗಿಂತ ಕೈಗಾರಿಕಾ ಪ್ರದೇಶದಲ್ಲೇ ಕಡಿಮೆ ಪ್ರಮಾಣದಲ್ಲಿ ಶಬ್ಧದ ಪ್ರಮಾಣ ದಾಖಲಾಗಿದೆ. ಪರಿವೇಷ್ಟಕ ವಾಯುವಿನ ಗುಣಮಟ್ಟ ಮಾಪನದಿಂದ ಈ ವಿಷಯ ಬೆಳಕಿಗೆ ಬಂದಿದೆ. ಮಾಪನ ಕೇಂದ್ರದ ಅಂಕಿ - ಅಂಶಗಳ ಪ್ರಕಾರ, ವಸತಿ ಪ್ರದೇಶಗಳಲ್ಲಿ ಹಗಲಿನಲ್ಲಿ 55 ಡೆಸಿಬಲ್, ರಾತ್ರಿ 45 ಡೆಸಿಬಲ್ನಷ್ಟು ಶಬ್ಧ ಇರಬೇಕು. ಆದರೆ, ಹೆಚ್ಚುತ್ತಿರುವ ವಾಹನ ದಟ್ಟಣೆ, ಕಾಮಗಾರಿ ನಿರ್ಮಾಣದಿಂದಾಗಿ ಈ ಬ್ಯಾಕ್ಗೌಂಡ್ ಶಬ್ಧಮಾಲಿನ್ಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ಏರಿಕೆ ಪ್ರಮಾಣ:
ಪ್ರದೇಶಗಳು | ಹಗಲು | ರಾತ್ರಿ |
ವಾಣಿಜ್ಯ ಪ್ರದೇಶ | ಶೇ.0.9 - ಶೇ.8.6 | ಶೇ 11.6- ಶೇ. 18.4 |
ವಸತಿ ಪ್ರದೇಶ | ಶೇ.0.9- ಶೇ.18.2 | ಶೇ.28.4 - ಶೇ.44 |
ಸೂಕ್ಷ್ಮ ಪ್ರದೇಶ | ಶೇ.17.8 - ಶೇ.32.8 | ಶೇ.35.0 - ಶೇ.73.2 |
ನಗರದಲ್ಲಿ ಶಬ್ಧದ ಗರಿಷ್ಠ ಪ್ರಮಾಣ ಎಲ್ಲೆಲ್ಲಿ? ಎಷ್ಟು?
ಮೈಸೂರು ರಸ್ತೆಯ ಆರ್ವಿಸಿಇ ಕಾಲೇಜು ಸಮೀಪ ಹಗಲಿನ ಮಿತಿಗಿಂತ ಶೇ 17.8 ರಾತ್ರಿ ವೇಳೆಯೇ ಶೇ 35 ಹೆಚ್ಚು ಶಬ್ಧವಿದೆ. ಅದೇ ರೀತಿ ಪ್ರಮುಖ 8 ಸ್ಥಳಗಳಲ್ಲಿ ರಾತ್ರಿ ಸಮಯದಲ್ಲೇ ಶಬ್ಧದ ಪ್ರಮಾಣ ಹೆಚ್ಚಾಗಿದೆ.
ಪ್ರಮುಖ 8 ಪ್ರದೇಶಗಳು:
ಪ್ರಮುಖ 8 ಪ್ರದೇಶಗಳು | ಹಗಲು | ರಾತ್ರಿ |
ಮೈಸೂರು ರಸ್ತೆಯ ಆರ್ವಿಸಿಇ ಕಾಲೇಜು | ಶೇ.17.8 | ಶೇ.35 |
ನಿಮ್ಹಾನ್ಸ್ | ಶೇ.32.8 | ಶೇ.73.2 |
ಬಿಟಿಎಂ ಲೇಔಟ್ | ಶೇ.18.2 | ಶೇ.44 |
ದೊಮ್ಮಲೂರು | ಶೇ.12 | ಶೇ.28.7 |
ಎಸ್.ಜಿ.ಹಳ್ಳಿ | ಶೇ.7.3 | ಶೇ.28.4 |
ಮಾರತಹಳ್ಳಿ | ಶೇ.3.8 | ಶೇ.19.6 |
ಯಶವಂತಪುರ | ಶೇ.8.6 | ಶೇ.18.4 |
ಚರ್ಚ್ ಸ್ಟ್ರೀಟ್ | ಶೇ.0.9 | ಶೇ.11.6 |