ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಆದ್ಮೇಲೆ ಜನ ಜಾಸ್ತಿ ನೀರು ಬಳಸ್ತಿಲ್ಲವಂತೆ.. ಬೆಂಗಳೂರಿಗಿಲ್ಲ ಜಲಕ್ಷಾಮ

ಲಾಕ್​ಡೌನ್​ ಪರಿಣಾಮದಿಂದಾಗಿ ಈ ವರ್ಷ ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳೋದಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್​ ಭರವಸೆ ನೀಡಿದ್ದಾರೆ.

No water problem in banglalore
ಬೆಂಗಳೂರಿಗಿಲ್ಲ ಜಲಕ್ಷಾಮ

By

Published : Apr 29, 2020, 4:04 PM IST

ಬೆಂಗಳೂರು:ಪ್ರಸ್ತುತ ಬೆಂಗಳೂರಿನಲ್ಲಿ ನೀರಿನ ಕೊರತೆ ಉದ್ಬವಿಸುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಬೆಂಗಳೂರಿಗಿಲ್ಲ ಜಲಕ್ಷಾಮ

ಕಳೆದ ತಿಂಗಳು ಮತ್ತು ಈ ತಿಂಗಳು ಮೀಟರ್ ರೀಡ್ ಮಾಡೋಕೆ ಹೋಗಿಲ್ಲ. ಪ್ರತಿ ತಿಂಗಳ ಸರಾಸರಿ ಆಧಾರದಲ್ಲಿ ಬಿಲ್ ಮಾಡಿದ್ದೇವೆ. ಅಲ್ಲದೇ ಆನ್ಲೈನ್ ದೂರುಗಳ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿದೆ. ಹೋಟೆಲ್, ಕಾರ್ಖಾನೆಗಳು ಹಾಗೂ ಕಮರ್ಷಿಯಲ್ ಸೆಕ್ಟರ್ ಹಾಗೂ ಟೆಕ್ ಪಾರ್ಕ್ ಮತ್ತು ಮಾಲ್​​​ಗಳಿಗೆ ಹೋಗ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಮನೆಬಳಕೆಗೆ ಉಪಯೋಗಿಸುತ್ತಿದ್ದ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವುದು ಯಾವಾಗಲೂ ಕೂಡಾ ಸಮಸ್ಯೆಯಾಗಿಲ್ಲ. ಕೆಲವೊಂದು ಬಾರಿ ತಾಂತ್ರಿಕ ತೊಂದರೆಯಿಂದಾಗಿ ನೀರು ಪೂರೈಕೆಯಾಗಿರಲಿಲ್ಲ. ಡ್ಯಾಮ್​ಗಳಲ್ಲಿ ಸಾಕಷ್ಟು ನೀರಿನ ಪ್ರಮಾಣವಿದೆ. ಬೆಂಗಳೂರಿನ ಸುತ್ತಮುತ್ತಲೂ 110 ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕ ಕಡಿಮೆ ಇರುವ ಕಾರಣದಿಂದ ಅಂತಹ ಕಡೆ ಸಮಸ್ಯೆಯಾಗಿದೆ. ಅಲ್ಲಿನ ಜನತೆ ಕೊಳವೆ ಬಾವಿಯ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಹೀಗಾಗಿ ಆದಷ್ಟು ಬೇಗ ನೀರಿನ ಸಂಪರ್ಕ ಪಡೆಯಿರಿ ಎಂದು ತುಷಾರ್ ಗಿರಿನಾಥ್​ ಮನವಿ ಮಾಡಿದ್ದಾರೆ.

ಈ ಮೊದಲು ಜಲಮಂಡಳಿಗೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಕರೆಗಳು ಬರುತ್ತಿದ್ದವು. ಈಗ ಕೇವಲ ನೂರರ ಆಸುಪಾಸಿನಲ್ಲಿ ದೂರಿನ ಕರೆಗಳು ಬರುತ್ತಿವೆ. ಈ ವರ್ಷ ಬೇಸಿಗೆ ಆರಂಭವಾಗಿದ್ದರೂ ಡ್ಯಾಮ್​ಗಳಲ್ಲಿ ನೀರಿನ ಮಟ್ಟ ಸಾಕಷ್ಟಿದೆ. ಕಬಿನಿಯಲ್ಲಿ 7 ಟಿಎಂಸಿ, ಕೆಆರ್​ಎಸ್​ನಲ್ಲಿ 17 ಟಿಎಂಸಿ ನೀರಿದ್ದು, ಯಾವುದೇ ಸಮಸ್ಯೆಯಾಗೋದಿಲ್ಲ ಎಂದು ತುಷಾರ್​ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details