ಬೆಂಗಳೂರು:ನಾಳೆ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಡಿಸಿಪಿಗಳ ತುರ್ತು ಸಭೆ ಕರೆದು ನಗರ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದರು.
ಮುಷ್ಕರ ವೇಳೆ ಸಂಚಾರ ಬದಲಾವಣೆ ಇಲ್ಲ: ಟ್ರಾಫಿಕ್ ಕಮಿಷನರ್ - ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ
ನಾಳೆ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಡಿಸಿಪಿಗಳ ತುರ್ತು ಸಭೆ ಕರೆದು ನಗರ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಂಚಾರ ಕುರಿತು ಮಾತಾಡಿ ನಾಳೆ ಸಂಘಟನೆಗಳು ಮುಷ್ಕರ ಕ್ಕೆ ಕರೆ ಹಿನ್ನಲೆ ಫ್ರೀಡಂ ಪಾರ್ಕ್ ನಲ್ಲಿ ಸಂಘಟನೆಗಳಿಗೆ ಅನುಮತಿ ಕೊಟ್ಟಿದ್ದು ಸದ್ಯಕ್ಕೆ ನಗರ ಮತ್ತು ಮೆಜೆಸ್ಟಿಕ್ ಕಾಪೋರೇಷನ್, ಕೆಆರ್ ಸರ್ಕಲ್ ಸುತ್ತ ಮುತ್ತ ಯಾವುದೇ ಮಾರ್ಗ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ನಗರದ ಎಂಟು ವಿಭಾಗ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರು ಭಾಗಿಯಾದ್ದರು. ನಾಳೆ ನಗರದಲ್ಲಿನ ಭದ್ರತೆಯ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಪ್ರತಿಭಟನಾ ಮೆರವಣಿಗೆ ಅವಕಾಶ ಕೊಡದಂತೆ, ನಗರದ್ಯಾಂತ ಕಟ್ಟೆಚ್ಚರ ವಹಿಸುವಂತೆ, ಮುಷ್ಕರದಲ್ಲಿ ಭಾಗಿಯಾಗುವ ಪ್ರತಿ ಸಂಘಟನೆಯ ಪ್ರತಿಭಟನೆಯನ್ನ ಚಿತ್ರೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ಬಳಿಕ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸಂಚಾರ ಕುರಿತು ಮಾತಾಡಿ ನಾಳೆ ಸಂಘಟನೆಗಳು ಮುಷ್ಕರ ಕ್ಕೆ ಕರೆ ಹಿನ್ನಲೆ ಫ್ರೀಡಂ ಪಾರ್ಕ್ ನಲ್ಲಿ ಸಂಘಟನೆಗಳಿಗೆ ಅನುಮತಿ ಕೊಟ್ಟಿದ್ದು ಸದ್ಯಕ್ಕೆ ನಗರ ಮತ್ತು ಮೆಜೆಸ್ಟಿಕ್ ಕಾಪೋರೇಷನ್, ಕೆಆರ್ ಸರ್ಕಲ್ ಸುತ್ತ ಮುತ್ತ ಯಾವುದೇ ಮಾರ್ಗ ಬದಲಾವಣೆ ಇಲ್ಲ. ಫ್ರೀಡಂ ಪಾರ್ಕ್ ಗೆ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲಾಗಿದೆ. ಎಲ್ಲ ಸಂಚಾರ ಪೊಲೀಸರು ನಾಳೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹಾಗೆ ನಾಳಿನ ಪರಿಸ್ಥಿತಿ ನೋಡಿಕೊಂಡು ಮಾರ್ಗ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.