ಕರ್ನಾಟಕ

karnataka

ETV Bharat / state

ರಾಜ್ಯ ಸಾರಿಗೆ ಬಸ್​ಗಳಲ್ಲಿ ಇನ್ಮುಂದೆ ಸಾಮಾಜಿಕ ಅಂತರವಿಲ್ಲ... ಆದರೆ ಈ ನಿಯಮಗಳು ಕಡ್ಡಾಯ - ಕೊರೊನಾ

ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಇನ್ಮುಂದೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮಕ್ಕೆ‌ ಬ್ರೇಕ್ ಹಾಕಲಾಗಿದೆ.

Bus
Bus

By

Published : Sep 2, 2020, 9:22 PM IST

ಬೆಂಗಳೂರು:ಕೊರೊನಾ ಹರಡುವಿಕೆ ಹಿನ್ನೆಲೆ ಬಸ್​ ಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ಸರ್ಕಾರ ಒಂದು ಬಸ್ಸಿನಲ್ಲಿ ಕೇವಲ 30 ಜನ ಮಾತ್ರ ಪ್ರಯಾಣಿಸಬೇಕು ಎಂಬ ಆದೇಶ ಜಾರಿಗೆ ತಂದಿತ್ತು. ಆದರೀಗ ಆ ನಿಯಮಕ್ಕೆ ಬ್ರೇಕ್ ಹಾಕಲಾಗಿದೆ.

ಇದೀಗ ಸಾರಿಗೆ ಸಂಸ್ಥೆ ಬಸ್ಸಿನಲ್ಲಿರುವ ಎಲ್ಲ ಸೀಟುಗಳನ್ನು ಪ್ರಯಾಣಿಕರು ಉಪಯೋಗಿಸಬಹುದು ಎಂದು ಆದೇಶಿಸಿದೆ. ಮೂರು ನಿಗಮಗಳ ಬಸ್​ ಗಳಲ್ಲಿ ನಿಗದಿಪಡಿಸಿರುವ ಆಸನಗಳಷ್ಟು ಪ್ರಯಾಣಿಕರು ಪ್ರಯಾಣಿಸಲು ಅನುಮತಿ ಇದೆ.

ಆದರೆ ಪ್ರತಿಯೊಬ್ಬ ಪ್ರಯಾಣಿಕರು ಫೇಸ್ ಮಾಸ್ಕ್ ಅನ್ನು ಕಟ್ಟುನಿಟ್ಟಾಗಿ ಧರಿಸತಕ್ಕದ್ದು. ಜನ‌ ಸಂದಣಿಯನ್ನ ತಡೆಗಟ್ಟಲು ಯಾವುದೇ ಪ್ರಯಾಣಿಕರನ್ನು ಬಸ್ಸಿನಲ್ಲಿ ನಿಂತು ಪ್ರಯಾಣಿಸಲು ಅನುಮತಿ ನೀಡಬಾರದು ಬಸ್ಸಿನಲ್ಲಿ ಎಸಿ‌ ಬಳಕೆ ಸಂಬಂಧವೂ ಮಾರ್ಗಸೂಚಿಯಂತೆ ಬಿಡುಗಡೆ ಮಾಡಿದ್ದು ಅದರಂತೆ ಅನುಷ್ಟಾನ ಗೊಳ್ಳಿಸುವಂತೆ ಸೂಚಿಸಲಾಗಿದೆ.

ನಿರ್ದಿಷ್ಟಪಡಿಸಿದ ಪ್ರತಿ ಪ್ರಯಾಣದ ನಂತರ ಸ್ಯಾನಿಟೈಸ್ ಮಾಡತಕ್ಕದ್ದು. ಆರೋಗ್ಯ ಇಲಾಖೆಯು ಈ ಷರತ್ತುಗಳನ್ನು ವಿಧಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.

ABOUT THE AUTHOR

...view details