ಕರ್ನಾಟಕ

karnataka

ETV Bharat / state

ಅಡುಗೆ ಅನಿಲ,ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಆಗಲ್ಲ.. - ಕೊರೊನಾ ತಡೆ

ಅನಗತ್ಯವಾಗಿ ಕೆಲ ಪುಡಾರಿಗಳು ಅಗತ್ಯ ವಸ್ತುಗಳ ಅಭಾವವಿದೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಅವುಗಳಿಗೆ ತಲೆಕೆಡಸಿಕೊಳ್ಳಬೇಡಿ. ಎಲ್ಲಾ ಅಗತ್ಯ ವಸ್ತುಗಳು ಲಭ್ಯವಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್​ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

no-shortage-of-needed-things-in-india
ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಇಲ್ಲ

By

Published : Mar 28, 2020, 11:02 PM IST

ಬೆಂಗಳೂರು :ಕೊರೊನಾ ತಡೆಗೆ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಅಭಾವ ಯಾವುದೇ ಕಾರಣಕ್ಕೂ ಉಂಟಾಗಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ.

ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಅಭಾವ ಇಲ್ಲ..

ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಸೇರಿ ಯಾವುದೇ ಜೀವನಾವಶ್ಯಕ ವಸ್ತುಗಳ ಅಭಾವ ಉಂಟಾಗಲ್ಲ. ಲಾಕ್​ಡೌನ್​ ಹಿನ್ನೆಲೆ ಅಡುಗೆ ಅನಿಲ ಸರಬರಾಜು ಮನೆ ಬಾಗಿಲಿಗೆ ನೀಡಲಾಗುತ್ತಿದೆ. ಇನ್ನುಳಿದಂತೆ ದೇಶದಲ್ಲಿ ಎಲ್ಲಾ ಪೆಟ್ರೋಲ್ ಬಂಕ್​ಗಳಿಗೆ ಅಗತ್ಯವಿರುವಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜನ್ನು ಇಂಡಿಯನ್ ಆಯಿಲ್, ಭಾರತ್ ಟ್ರೋಲಿಯಂ ಹಾಗೂ ಹೆಚ್​ಪಿಸಿ ದೊರಕಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಕೆಲವರ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅಗತ್ಯವಿರುವ ಸಂದರ್ಭದಲ್ಲಿ ಗ್ರಾಹಕರು ಖರೀದಿ ಮಾಡಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ABOUT THE AUTHOR

...view details