ಬೆಂಗಳೂರು:ಮತದಾನ ಮಾಡಿದ್ರೂ ವೋಟರ್ ಸ್ಲಿಪ್ಗೆ ಸೀಲ್, ಸಹಿ ಹಾಕಿಲ್ಲ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ರಾಮಲಿಂಗೇಗೌಡ ಅಳಲು ತೋಡಿಕೊಂಡಿದ್ದಾರೆ.
ಸೀಲು, ಸೈನ್ ಇಲ್ಲದ ವೋಟರ್ ಸ್ಲಿಪ್: ಕಂಪನಿ ಒಪ್ಪಲ್ಲ ಎಂದು ಉದ್ಯೋಗಿಯೊಬ್ಬರ ಪರದಾಟ - ಓಟ್ ಮಾಡಿರುವ ಮತದಾರನ ಅಳಲು ಬೆಂಗಳೂರು ಸುದ್ದಿ
ಮತದಾನ ಮಾಡಿದ್ರೂ ವೋಟರ್ ಸ್ಲಿಪ್ಗೆ ಸೀಲ್, ಸಹಿ ಹಾಕಿಲ್ಲ ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ರಾಮಲಿಂಗೇಗೌಡ ಅಳಲು ತೋಡಿಕೊಂಡಿದ್ದಾರೆ.
ಸರಿಯಾದ ಆಧಾರ ಇಲ್ಲದೇ ಮತದಾನ ಮಾಡಿರುವ ಬಗ್ಗೆ ಕೆಲಸ ಮಾಡುವ ಸಂಸ್ಥೆ ಒಪ್ಪಲ್ಲ. ಇಂದಿನ ರಜೆ, ಸ್ಯಾಲರಿ ಸಿಗಬೇಕಾದ್ರೆ ಚುನಾವಣಾ ಸಿಬ್ಬಂದಿ ಸಹಿ ಮುಖ್ಯ ಅಂತ ಖಾಸಗಿ ಸಂಸ್ಥೆಯ ಉದ್ಯೋಗಿ ರಾಮಲಿಂಗೇಗೌಡ ಅಳಲು ತೋಡಿಕೊಂಡಿದ್ದರು. ಬೆಳಗ್ಗೆಯೇ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಪಬ್ಲಿಕ್ ಸ್ಕೂಲ್ನ ಸಖಿ ಬೂತ್ನಲ್ಲಿ ವೋಟು ಮಾಡಿರುವ ಮತದಾರ, ವೋಟು ಸ್ಲಿಪ್ಗೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ.
ಇನ್ನು ಚುನಾವಣಾ ಸಿಬ್ಬಂದಿ, ನಮ್ಮಲ್ಲಿ ಇನ್ ಚಾರ್ಜ್ ಇಲ್ಲ. ನೀವು ಬೇರೆ ಬೂತ್ಗೆ ಹೋಗಿ ಇಲ್ಲಿ ಸಹಿ ಹಾಕೋದಿಲ್ಲ ಅಂತ ಬೇಜವಾಬ್ದಾರಿ ತೋರಿದ್ದಾರೆ. ಸಹಿ ಮತ್ತು ಸೀಲ್ ಇಲ್ಲ ಅಂದ್ರೆ ಕಚೇರಿಯಲ್ಲಿ ಸಂಬಳ ಕಟ್ ಮಾಡ್ತಾರೆ. ಯಾರನ್ನು ಕೇಳ್ಬೇಕು ಎಂದು ಯಾರೂ ಹೇಳ್ತಿಲ್ಲ ಎಂದರು.