ಬೆಂಗಳೂರು: ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲ್ಲ. ನಮಗೆ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ ಎಂದು ಪೋಷಕರು 'ನೋ ಸ್ಕೂಲ್ಸ್' ಅಭಿಯಾನ ಆರಂಭಿಸಿದ್ದಾರೆ.
'ನೋ ಸ್ಕೂಲ್ಸ್' ಅಭಿಯಾನ: ಕೊರೊನಾ ಜೀರೋಗೆ ಬರೋವರೆಗೆ ಮಕ್ಕಳನ್ನ ಶಾಲೆಗೆ ಕಳುಹಿಸಲ್ಲ ಅಂತಿದ್ದಾರೆ ಪೋಷಕರು! - ಕೊರೊನಾ
ಕೇಂದ್ರದ ಗೃಹ ಮಂತ್ರಾಲಯವು ಶಾಲೆಗಳನ್ನ ತೆರೆಯಲು ಆಯಾ ರಾಜ್ಯಕ್ಕೆ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಪೋಷಕರು ಈ ಶೈಕ್ಷಣಿಕ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ.
no school campaign
ಕೇಂದ್ರದ ಗೃಹಮಂತ್ರಾಲಯವು ಶಾಲೆಗಳನ್ನ ತೆರೆಯಲು ಆಯಾ ರಾಜ್ಯಕ್ಕೆ ಅನುಮತಿ ನೀಡಿದೆ. ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ನಂತರ ಶಾಲೆಗಳನ್ನ ಆರಂಭಿಸುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದರ ಬೆನ್ನಲ್ಲೇ ಪೋಷಕರು ಈ ಶೈಕ್ಷಣಿಕ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕಾಗಿ ಆನ್ಲೈನ್ ಸಹಿ ಸಂಗ್ರಹ ನಡೆಯುತ್ತಿದ್ದು, ಕೊರೊನಾಗೆ ಲಸಿಕೆ ದೊರೆಯುವವರೆಗೆ ಶಾಲೆಗಳು ತೆರೆಯದಂತೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದೆ.