ಬೆಂಗಳೂರು: ಉಡುಪಿಯ ಪೇಜಾವರ ಸ್ವಾಮೀಜಿಯವರ ನಿಧನದ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆಯನ್ನ ಸರ್ಕಾರ ಘೋಷಿಸಿದೆ. ಹೀಗಾಗಿ ಮೂರು ದಿನಗಳ ಕಾಲ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡತಡೆ ಇಲ್ಲ. ಈಗಾಗಲೇ ಎಲ್ಲ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೂರು ದಿನ ಶೋಕಾಚರಣೆ: ಹೊಸ ವರ್ಷದ ಸಂಭ್ರಮಕ್ಕಿಲ್ಲ ಅಡೆತಡೆ - no-restriction-for-new-year-celebration-in-bangalore
ಪೇಜಾವರ ಸ್ವಾಮೀಜಿ ನಿಧನ ಹಿನ್ನೆಲೆ ಮೂರು ದಿನ ಶೋಕಾಚರಣೆ ಇದೆ. ಆದ್ರೆ ಹೊಸ ವರ್ಷಾಚರಣೆಗೆ ಯಾವುದೇ ಅಡೆ ತಡೆ ಇಲ್ಲವೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ಅಡೆ ತಡೆ ಇಲ್ಲ
ಆದರೆ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ, ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಹೊಸ ವರ್ಷಾಚರಣೆ ಸಂಭ್ರಮ ಮಾಡುವುದಿಲ್ಲ. ಆದ್ರೆ ನಗರದ ಬ್ರಿಗೇಡ್ ರೋಡ್, ಎಂ ಜಿ ರೋಡ್ ಹಾಗೂ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಹೊಸ ವರ್ಷಾಚರಣೆಯು ಖಾಸಗಿ ಕಾರ್ಯಕ್ರಮ. ಅದಕ್ಕೆ ಯಾವುದೇ ರೀತಿಯ ಅಡೆತಡೆಗಳು ಇಲ್ಲ. ಪೊಲೀಸ್ ಇಲಾಖೆಯಿಂದ ನೀಡುವ ಭದ್ರತೆ ಖಂಡಿತ ಒದಗಿಸಲಾಗುವುದು ಎಂದು ಅಭಯ ನೀಡಿದ್ದಾರೆ.