ಬೆಂಗಳೂರು:ನಗರದ ಕ್ವಾರಂಟೈನ್ ಕೇಂದ್ರದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಮಹಿಳೆಗೆ ಪಿಟ್ಸ್ ಬಂದಿದ್ದರೂ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಕಳೆದ ರಾತ್ರಿ ಸುಮಾರು 9 ಗಂಟೆಗೆ ಮಹಿಳೆಯೊಬ್ಬರಿಗೆ ಪಿಟ್ಸ್ ಬಂದಿತ್ತು. ತಕ್ಷಣ ಇತರ ಕ್ವಾರಂಟೈನ್ನಲ್ಲಿರುವವರು ಕೇಂದ್ರದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ, ವೈದ್ಯಕೀಯ ಸೌಲಭ್ಯ ನೀಡದೇ ಕ್ವಾರಂಟೈನ್ ನೋಡಿಕೊಳ್ಳುವ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.