ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು, ಈ ನಡುವೆ ಆರೋಗ್ಯ ಇಲಾಖೆಯು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿ ಸಿಬ್ಬಂದಿಯು ತಮ್ಮ ಮನೆಗಳಿಗೆ ತೆರಳಬಹುದು ಎಂದು ಆದೇಶ ಹೊರಡಿಸಿದೆ. ಇದರಿಂದ ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಯಾಗಿದೆ.
ಕೋವಿಡ್-19 ಟ್ರೀಟ್ಮೆಂಟ್ ಬಳಿಕ ಕೊರೊನಾ ವಾರಿಯರ್ಸ್ಗಿಲ್ಲ ಕ್ವಾರಂಟೈನ್! - ಕೊರೊನಾ ವಾರಿಯರ್ಸ್ಗಿಲ್ಲ ಕ್ವಾರಂಟೈನ್
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್-19 ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆರೋಗ್ಯ ಇಲಾಖೆ ಹೊಸ ಆದೇಶವನ್ನು ಹೊರಡಿಸಿದ್ದು, ಸಿಬ್ಬಂದಿ ಕೆಲಸವನ್ನು ಮುಗಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಲು ತಿಳಿಸಿದೆ. ವಿಷಯ ತಿಳಿದು ಸಿಬ್ಬಂದಿಗೆ ಆತಂಕ ಮೂಡಿದ್ದು, ಕೆಲಸ ಮುಗಿಸಿಕೊಂಡು ಮನೆಗಳಿಗೆ ತೆರಳಿದರೆ ಎಲ್ಲಿ ತಮ್ಮ ಕುಟುಂಬದವರಿಗೂ ತಮ್ಮಿಂದ ಸೋಂಕು ತಗುಲುತ್ತಾ ಎಂಬ ಆತಂಕ ಮನೆ ಉಂಟಾಗಿದೆ.
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್-19 ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆರೋಗ್ಯ ಇಲಾಖೆ ಹೊಸ ಆದೇಶವನ್ನು ಹೊರಡಿಸಿದ್ದು, ಸಿಬ್ಬಂದಿ ಕೆಲಸವನ್ನು ಮುಗಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಲು ತಿಳಿಸಿದೆ. ವಿಷಯ ತಿಳಿದು ಸಿಬ್ಬಂದಿಗೆ ಆತಂಕ ಮೂಡಿದ್ದು, ಕೆಲಸ ಮುಗಿಸಿಕೊಂಡು ಮನೆಗಳಿಗೆ ತೆರಳಿದರೆ ಎಲ್ಲಿ ತಮ್ಮ ಕುಟುಂಬದವರಿಗೂ ನಮ್ಮಿಂದ ಸೋಂಕು ತಗುಲುತ್ತದೆಯೋ ಎಂಬ ಆತಂಕ ಮನೆಮಾಡಿದೆ.
ಈ ಹಿಂದೆ ಚಿಕಿತ್ಸೆ ನೀಡಿದ ನಂತರ ವೈದ್ಯಕೀಯ ಕೊರೊನಾ ವಾರಿಯರ್ಸ್ಗೆ 14 ದಿನ ಕ್ವಾರಂಟೈನ್ಗೆ ಒಳಗಾಗಬೇಕಾಗಿತ್ತು. ಆದರೆ ಕ್ವಾರಂಟೈನ್ ರದ್ದು ಮಾಡಲಾಗಿದೆ. ಸಿಬ್ಬಂದಿ ಪ್ರತಿದಿನ ಕೆಲಸ ಆರಂಭಿಸುವ ಮೊದಲು ದೇಹದ ಉಷ್ಣತೆ, ರೋಗದ ಲಕ್ಷಣಗಳಿವೆಯಾ ಎಂದು ಸ್ವಯಂ ತಪಾಸಣೆ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.