ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳ ವಶದಲ್ಲಿರುವ ಮನ್ಸೂರನ್ನ ಎಸ್ಐಟಿ ಒಂದು ಕಡೆ ಡ್ರಿಲ್ ಮಾಡಿಸುತ್ತಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ: ಬಕ್ರೀದ್ ದಿನವೂ ಮನ್ಸೂರ್ಗೆ ಎಸ್ಐಟಿ ಡ್ರಿಲ್ - ಮನ್ಸೂರ್ ಖಾನ್
ಕುಟುಂಬಸ್ಥರ ಜೊತೆ ಬಕ್ರೀದ್ ಆಚರಿಸಲು ಸಮಯವಾಕಾಶ ಕೇಳಿದ್ದ ಮನ್ಸೂರ್ ಖಾನ್ಗೆ ಎಸ್ಐಟಿ ಅವಕಾಶ ನೀಡದೆ ಕಚೇರಿಯಲ್ಲಿಯೇ ನಮಾಜ್ ಮಾಡಲು ಅವಕಾಶ ಕಲ್ಪಿಸಿದೆ.
ಮನ್ಸೂರ್ ಖಾನ್
ಬಕ್ರೀದ್ ಆಚರಣೆಯನ್ನ ಕುಟುಂಬಸ್ಥರ ಜೊತೆ ಅಥವಾ ಮಸೀದಿಗೆ ಹೋಗಿ ನಮಾಜ್ ಮಾಡಲು ಸಮಾಯವಾಕಾಶ ನೀಡುವಂತೆ ಮನ್ಸೂರ್ ಕೇಳಿದ್ದ ಎನ್ನಲಾಗ್ತಿದೆ. ಆದರೆ ಐಎಂಎ ಪ್ರಕರಣ ಬಹಳ ಸೂಕ್ಷ್ಮವಾದ ಕಾರಣ ಆತನಿಗೆ ಅವಕಾಶ ನೀಡದೆ ಕೇವಲ ಎಸ್ಐಟಿ ಕಚೇರಿಯಲ್ಲಿಯೇ ನಮಾಜ್ ಮಾಡುವಂತೆ ತಿಳಿಸಿ, ನಂತರ ಯಥಾಪ್ರಕಾರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಇದೇ 16ಕ್ಕೆ ಮನ್ಸೂರ್ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆ ಪ್ರಕರಣದಲ್ಲಿ ಬಹಳಷ್ಟು ಮಾಹಿತಿ ಕಲೆಹಾಕಬೇಕಾಗಿದೆ. ಹೀಗಾಗಿ ತನಿಖಾಧಿಕಾರಿಗಳು ಬಹಳ ಬಿರುಸಿನಿಂದ ತನಿಖೆ ಮುಂದುವರೆಸಿದ್ದಾರೆ.