ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇತ್ತ ತೀವ್ರ ನಿಗಾ ಘಟಕದಲ್ಲಿ 695 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಬೆಡ್ಗಳ ಸಮಸ್ಯೆ ರಾಜ್ಯದಲ್ಲಿ ಇಲ್ಲವೆಂದು ಸರ್ಕಾರ ಹೇಳಿದರೂ ಸಹ ಇಂದು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಪರದಾಟ ನಡೆಸಿದ್ದಾರೆ.
ಕಿಮ್ಸ್ನಲ್ಲಿ ಆಕ್ಸಿಜನ್ ಕೊರತೆ: ಕೊರೊನಾ ಸೋಂಕಿತರ ಪರದಾಟ - ಕೊರೊನಾ ಸೋಕಿತ
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಕ್ಸಿಜನ್ ಕೊರತೆಯುಂಟಾಗಿ, ರೋಗಿಗಳು ಪರದಾಡುವಂತಹ ಪರಿಸ್ಥಿತಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಯೂನಿವರ್ಸಲ್ ಗ್ಯಾಸ್ ಏಜನ್ಸಿ ಆಕ್ಸಿಜನ್ ಪೂರೈಸುತ್ತಿತ್ತು. ಆದರೆ ಕಳೆದ 2 ದಿನಗಳಿಂದ ಆಕ್ಸಿಜನ್ ಪೂರೈಕೆ ಮಾಡಿರಲಿಲ್ಲ. ಒಟ್ಟು 47 ರೋಗಿಗಳನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗ್ತಿದೆ. ಸದ್ಯ ಕಿಮ್ಸ್ ನಿಂದ ಬೌರಿಂಗ್, ವಿಕ್ಟೋರಿಯಾ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗೆ ರೋಗಿಗಳನ್ನ ಶಿಫ್ಟ್ ಮಾಡಲಾಗ್ತಿದೆ. ಇಂದು ಮಧ್ಯರಾತ್ರಿ ಆಕ್ಸಿಜನ್ ಪೂರೈಕೆ ಮಾಡುವುದಾಗಿ ಪೂರೈಕೆದಾರರು ಹೇಳಿದ್ದಾರೆ. ಆದರೆ ಮುಂಜಾಗ್ರತಾ ದೃಷ್ಟಿಯಿಂದ ರೋಗಿಗಳಿಗೆ ಸಮಸ್ಯೆ ಆಗಬಾರದು ಎಂದು ರೋಗಿಗಳನ್ನ ಸ್ಥಳಾಂತರ ಮಾಡಲಾಗ್ತಿದೆ.
ಕೊರೊನಾ ಹೆಚ್ಚಳದ ಬಳಿಕ ಮೂರು ಪಟ್ಟು ಆಕ್ಸಿಜನ್ ಬಳಕೆ ಹೆಚ್ಚಾಗಿದೆ. ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡುವವರಿಗೂ ಸಮಸ್ಯೆ ಆಗಿದೆ. 410 ಕೋವಿಡ್ ಬೆಡ್ ನಿಗದಿಯಾಗಿದ್ದು, ಐಸಿಯುನಲ್ಲಿ 19 ರೋಗಿಗಳು ಇದ್ದಾರೆ. ಎನ್ಐಸಿಯುನಲ್ಲಿ 27 ಮಕ್ಕಳು, 19 ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ಅವಶ್ಯಕತೆ ಇದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.