ಬೆಂಗಳೂರು: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಇವತ್ತಿನ ಪೀಳಿಗೆಗೆ ಅರಿವೇ ಇಲ್ಲ. ಇಂತಹ ನಾಯಕರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್ನ ಹಿರಿಯ ಮುಖಂಡ ಆರ್ ವಿ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ತ್ಯಾಗ, ಬಲಿದಾನ ಮಾಡಿದವರ ಬಗ್ಗೆ ಅರಿವು ಕಡಿಮೆ.. ಆರ್.ವಿ.ಹರೀಶ್
ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತಕ್ಕೆ ಬಂದ ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದ್ದರು. ಆ ವೇಳೆ ಮಹಾತ್ಮಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇವತ್ತಿನ ಪೀಳಿಗೆಗೆ ಅದರ ಅರಿವೇ ಇಲ್ಲ ಎಂದು ಆರ್.ವಿ.ಹರೀಶ್ ಬೇಸರ ವ್ಯಕ್ತಪಡಿಸಿದರು.
ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷದ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಸ್ಟ್ ಇಂಡಿಯಾ ಕಂಪನಿ ಮೂಲಕ ಭಾರತಕ್ಕೆ ಬಂದ ಬ್ರಿಟಿಷರು, ನಮ್ಮನ್ನು ಗುಲಾಮರನ್ನಾಗಿಸಿದ್ದರು. ಆ ವೇಳೆ ಮಹಾತ್ಮಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇವತ್ತಿನ ಪೀಳಿಗೆಗೆ ಅದರ ಅರಿವೇ ಇಲ್ಲ ಎಂದರು.
ನೆಹರು ಅವರು ಡಿಸ್ಕವರಿ ಆಫ್ ಇಂಡಿಯಾ ಮೂಲಕ ಆನೇಕ ಕಾರ್ಯಕ್ರಮಗಳನ್ನು ಮಾಡಿದ್ದರು. ಬ್ರಿಟಿಷರು ದೇಶ ಬಿಟ್ಟು ಹೋದ ನಂತರ ಖಜಾನೆಯಲ್ಲಿ ಹಣವಿರಲಿಲ್ಲ. ಎರಡು ದೇಶ ಒಂದಾದಾಗ ಯಾರು ಎಲ್ಲಿ ಬೇಕಾದರೂ ಇರಬಹುದು ಎಂದಿದ್ದರು. ಆಗ ನೆಹರು ಅವರ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ಇತಿಹಾಸದ ಬಗ್ಗೆ ಅರಿವು ಮೂಡಿಸಿದರು.