ಕರ್ನಾಟಕ

karnataka

ಜಿಲ್ಲಾ ಉಸ್ತುವಾರಿ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ: ಸಿಎಂ ಬೊಮ್ಮಾಯಿ

By

Published : Jan 25, 2022, 12:47 PM IST

Updated : Jan 25, 2022, 1:12 PM IST

ಕಾಂಗ್ರೆಸ್ ಬೇಡ ಅಂತಾ ಅವರು ಬಿಜೆಪಿಗೆ ಬಂದಿದ್ದಾರೆ.‌ ಹೀಗಾಗಿ, ಕಾಂಗ್ರೆಸ್‌ಗೆ ಮರಳುವ ಪ್ರಶ್ನೆನೇ ಇಲ್ಲ. ಕೆಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆದರೆ, ಅದರ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಆದರೆ, ಅದು ನಿಮಗೇ ಗೊತ್ತಾಗಲಿದೆ. ಕೆಲ ದಿನ ಕಾಯಿರಿ, ಬಿಜೆಪಿ ಬಲವರ್ಧನೆ ಹೇಗೆ ಆಗುತ್ತೆ ನೋಡಿ..

CM Bommai reaction about district in charge minister post, district in charge ministers, CM Basavaraj bommai news, ಜಿಲ್ಲಾ ಉಸ್ತುವಾರಿ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದ ಸಿಎಂ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ, ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿ,
ಸಿಎಂ ಬೊಮ್ಮಾಯಿ

ಬೆಂಗಳೂರು :ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಎಲ್ಲರ ಬಳಿ ನಾನು ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾ ಉಸ್ತುವಾರಿ ಹಂಚಿಕೆ ಕುರಿತಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು..

ಜಿಲ್ಲಾ ಉಸ್ತುವಾರಿ ಬಗ್ಗೆ ಅಸಮಾಧಾನ ವಿಚಾರವಾಗಿ ವಿಧಾನಸೌಧದಲ್ಲಿಪ್ರತಿಕ್ರಿಯಿಸಿದ ಅವರು, ಯಾರು ಅಸಮಾಧಾನ ವ್ಯಕ್ತಪಡಿಸಿಲ್ಲ. ಎಲ್ಲರ ಬಳಿ ಮಾತನಾಡಿದ್ದೇನೆ. ಜಿಲ್ಲಾ ಉಸ್ತುವಾರಿ ನೀಡುವ ಮುನ್ನವೂ ಅವರ ಬಳಿ ಮಾತನಾಡಿದ್ದೇನೆ. ನಂತರವೂ ನಾನು ಮಾತನಾಡಿದ್ದೇನೆ. ಇದು ನಮ್ಮ ಪಕ್ಷದ ರಾಜಕೀಯ ನೀತಿ ಎಂದರು.

ಓದಿ:ಸುಳ್ಯ : ಮಗನ ಎದೆಗೆ ಚೂರಿ ಇರಿದ ತಂದೆ!

ಯಾವುದೇ ಅಸಮಾಧಾನ ಇಲ್ಲ. ಎಲ್ಲ ಸಚಿವರ ಬಳಿಯೂ ನಾನು ಮಾತನಾಡಿದ್ದೇನೆ. ಅಸಮಾಧಾನ ಪ್ರಶ್ನೆಯೇ ಇಲ್ಲ. ಸರ್ಕಾರವು ಅತ್ಯಂತ ಸೂಕ್ತವಾಗಿ ಕೆಲಸ ಮಾಡಲು ಬದ್ಧವಾಗಿದೆ. ಅಸಮಾಧಾನ ವಸ್ತು ಸ್ಥಿತಿಗೆ ದೂರವಾಗಿದೆ. ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು. ವಲಸಿಗರು ವಾಪಸ್​ ಕಾಂಗ್ರೆಸ್​ಗೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬೇಡ ಅಂತಾ ಅವರು ಬಿಜೆಪಿಗೆ ಬಂದಿದ್ದಾರೆ.‌ ಹೀಗಾಗಿ, ಕಾಂಗ್ರೆಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದರು.

ಕೆಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಆದರೆ, ಅದರ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಆದರೆ, ಅದು ನಿಮಗೇ ಗೊತ್ತಾಗಲಿದೆ. ಕೆಲ ದಿನ ಕಾಯಿರಿ, ಬಿಜೆಪಿ ಬಲವರ್ಧನೆ ಹೇಗೆ ಆಗುತ್ತೆ ನೋಡಿ ಎಂದು ಸೂಚ್ಯವಾಗಿ ತಿಳಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 25, 2022, 1:12 PM IST

ABOUT THE AUTHOR

...view details