ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಗಳಲ್ಲಿ ಅರ್ಹ ಪಡಿತರ ಫಲಾನುಭವಿಗಳಿಂದ ದಾಖಲಾತಿ ಕೇಳುವಂತಿಲ್ಲ: ಆಹಾರ ಇಲಾಖೆ - ಪಡಿತರ ಚೀಟಿ

ನೆರೆಯಿಂದಾಗಿ ಜನರು ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ದಾಖಲಾತಿಗಳನ್ನು ಹೇಗೆ ಇಟ್ಟುಕೊಳ್ಳಲು ಸಾಧ್ಯ.? ಯಾವುದೇ ದಾಖಲಾತಿಗಳನ್ನು ಕೇಳದೆ ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ಮಾಡಬೇಕು ಎಂದು ಆಹಾರ ಇಲಾಖೆ ನಿರ್ದೇಶನ ನೀಡಿದೆ.

ಆಹಾರ ಇಲಾಖೆಯ ಸುತ್ತೋಲೆ

By

Published : Sep 8, 2019, 3:20 AM IST

ಬೆಂಗಳೂರು:ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪಡಿತರ ಅಂಗಡಿಗಳು ಅರ್ಹ ಫಲಾನುಭವಿಗಳಿಂದ ಪಡಿತರ ವಿತರಣೆ ವೇಳೆ ಯಾವುದೇ ದಾಖಲಾತಿಗಳನ್ನು ಕೇಳದಂತೆ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆ ಸೂಚನೆ ನೀಡಿದೆ.

ಆಹಾರ ಇಲಾಖೆಯ ಸುತ್ತೋಲೆ

ಈ ಸಂಬಂಧ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ನೆರೆ ಪೀಡಿತಕ್ಕೊಳಗಾದ ಪ್ರದೇಶಗಳಲ್ಲಿನ ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವಾಗ ಯಾವುದೇ ದಾಖಲಾತಿಗಳನ್ನು ಕೇಳುವಂತಿಲ್ಲ ಎಂದು ನಿರ್ದೇಶನ‌ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಅರ್ಹ ಪಡಿತರ ಫಲಾನುಭವಿಗಳಿಂದ ಪಡಿತರ ಚೀಟಿ, ಆಧಾರ್ ಕಾರ್ಡ್, ಗುರುತಿನ‌ ಚೀಟಿಯನ್ನು ಹಾಜರುಪಡಿಸುವುದು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದೆ.

ಆಹಾರ ಇಲಾಖೆಯ ಸುತ್ತೋಲೆ

ನೆರೆ ಪೀಡಿತ ಪ್ರದೇಶಗಳಲ್ಲಿ ಪಡಿತರ ಚೀಟಿ ಸೇರಿದಂತೆ ಎಲ್ಲ ಪ್ರಮುಖ ಗುರುತಿನ ದಾಖಲಾತಿಗಳು ನೀರು ಪಾಲಾಗಿವೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಪಡಿತರ ಫಲಾನುಭವಿಗಳಿಗೆ ಪಡಿತರ ನೀಡಲು ದಾಖಲಾತಿ ಕೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿತ್ತು. ಈ ಹಿನ್ನಲೆಯಲ್ಲಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಈ ಸುತ್ತೋಲೆ ಹೊರಡಿಸಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿರುವ ಪಡಿತರ ಪಲಾನುಭವಿಗಳ ಮಾಹಿತಿಯನ್ನು ಆಧರಿಸಿ ಇಂಟರ್​ನೆಟ್​​ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ ಮಾತ್ರ ಆಫ್ ಲೈನ್ ಮೂಲಕ ಮುಂದಿನ ಮೂರು ತಿಂಗಳವರೆಗೆ ಪಡಿತರ ವಿತರಣೆ ಮಾಡಬಹುದಾಗಿದೆ ಎಂದು ನಿರ್ದೇಶನ ನೀಡಲಾಗಿದೆ.

ಆಹಾರ ಇಲಾಖೆಯ ಸೂಚನೆ ಏನು?:

  • ಪಡಿತರ ಪಡೆಯಲು ಬಂದವರ ಮೇಲೆ ಅನುಮಾನ ಇದ್ದರೆ ಅವರ ವಿಳಾಸ, ಹೆಸರು, ಮೊಬೈಲ್ ನಂ. ಪಡೆದು ಖಾತರಿ ಮಾಡುವುದು
  • ಪ್ರವಾಹದಲ್ಲಿ ಪಡಿತರ ಚೀಟಿ ಕಳೆದುಕೊಂಡವರಿಗೆ ಕೂಡಲೇ ಪಡಿತರ ಚೀಟಿ ವಿತರಿಸಬೇಕು
  • ಆಫ್​​ಲೈನ್​ ಮೂಲಕ‌‌ ಪಡಿತರ ವಿತರಣೆ ಮಾಡುವ ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಫಲಾನುಭವಿಗಳ ವಿವರವನ್ನು ತಿಂಗಳಾಂತ್ಯದಲ್ಲಿ ಅವರಿಗೆ ವಿತರಿಸಿರುವ ಪಡಿತರ ಪ್ರಮಾಣದ ವಿವರದೊಂದಿಗೆ ಆಹಾರ ಡಾಟಾಬೇಸ್​ಗೆ ಅಪ್ ಲೋಡ್ ಮಾಡಲು ಕ್ರಮ
  • ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಶೇಷ ಆಂದೋಲನ ಮೂಲಕ ಎಲ್ಲ ಫಲಾನುಭವಿಗಳಿಗೆ ಅವರ ಪಡಿತರ ಚೀಟಿಗಳ ಪ್ರತಿಯನ್ನು ಮುದ್ರಿಸಿ ನೀಡಲು ಕ್ರಮ ವಹಿಸಲಾಗಿದೆ

ABOUT THE AUTHOR

...view details