ಕರ್ನಾಟಕ

karnataka

ETV Bharat / state

ಜೆಡಿಎಸ್ ಜೊತೆ ಹೊಂದಾಣಿಕೆ ಅವಶ್ಯಕತೆ ಇಲ್ಲ: ಬಿ.ಸಿ.ಪಾಟೀಲ್ - B C Patil talks about JDS at Bengalore

ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಮಗೆ ಯಾರ ಬೆಂಬಲ ಕೂಡ ಸದ್ಯಕ್ಕೆ ಬೇಡ. ಯಾರಾದರೂ ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬಂದ್ರೆ ನಾವು ಸ್ವಾಗತ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

b-c-patil
ಬಿ.ಸಿ.ಪಾಟೀಲ್

By

Published : Dec 21, 2020, 6:02 PM IST

ಬೆಂಗಳೂರು: ಈಗ ಯಾವುದೇ ಚುನಾವಣೆ ಇಲ್ಲ. ಜೆಡಿಎಸ್ ಜೊತೆ ಹೊಂದಾಣಿಕೆ ಅವಶ್ಯಕತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆಯನ್ನು ವಿತರಿಸುವ ಸಂಬಂಧ ಇಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಸಭೆಯ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್, 2016 / 2017ರಿಂದ ಈತನಕ ಬರಬೇಕಾದ ವಿಮೆ ಹಣ ಕೊಡುವಂತೆ ಮನವಿ ಮಾಡಲಾಗಿದೆ ಎಂದರು.

ಬಿ.ಸಿ.ಪಾಟೀಲ್, ಸಚಿವ

ಓದಿ:ಪಕ್ಷ ಸಂಘಟನೆಯ ಕಷ್ಟ ಯಡಿಯೂರಪ್ಪರಿಗೆ ಗೊತ್ತು: ಸಿಎಂ ಪರ ಮಾಜಿ ಸಿಎಂ ಬ್ಯಾಟಿಂಗ್​​!

ಜೆಡಿಎಸ್ ಜೊತೆ ಹೊಂದಾಣಿಕೆ ಅವಶ್ಯಕತೆಯಿಲ್ಲ. ಈಗ ಯಾವುದೇ ಚುನಾವಣೆ ಇಲ್ಲ. ಬಿಜೆಪಿಗೆ ಬಹುಮತ ಇದೆ. 119 ಜನ ಶಾಸಕರು ಇದ್ದಾರೆ. ಜೆಡಿಎಸ್​​ನವರು ಗಿಮಿಕ್ ಮಾಡುತ್ತಿದ್ದಾರೆ. ಯಾವುದಕ್ಕೆ ಗಿಮಿಕ್ ಮಾಡುತ್ತಿದ್ದಾರೆ ನಿಮಗೆ ಗೊತ್ತಿದೆ. ಅದನ್ನು ನನ್ನ ಬಾಯಿಂದ ಯಾಕೆ ಹೇಳಿಸ್ತೀರಾ? ಬಿಜೆಪಿ ಸರ್ಕಾರ ಸುಭದ್ರವಾಗಿದೆ. ನಮಗೆ ಯಾರ ಬೆಂಬಲ ಕೂಡ ಸದ್ಯ ಬೇಡ. ಯಾರಾದರೂ ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಬಂದ್ರೆ ನಾವು ಸ್ವಾಗತ ಮಾಡುತ್ತೇವೆ ಎಂದರು.

ಓದಿ:ಮೊದಲ ಹಂತದ ಗ್ರಾಪಂ ಚುನಾವಣೆಗೆ ನಾಳೆ ಮತದಾನ: ಕಣದಲ್ಲಿ 1,17,383 ಅಭ್ಯರ್ಥಿಗಳು

ಸಭೆಯಲ್ಲಿ ಡಿಸಿಎಂ ಲಕ್ಷ್ಮಣ್​ ಸವದಿ, ಸಂಸದ ಖೂಬಾ, ಉದಾಸಿ ಮುಂತಾದವರು ಭಾಗವಹಿಸಿದ್ದರು. ರೈತರಿಗೆ ಬೆಳೆ ವಿಮೆ ಸಮರ್ಪಕವಾಗಿ ವಿತರಿಸುವ ಹಾಗೂ ಇದರ ಕುರಿತು ಮಾಹಿತಿ ಕಲೆಹಾಕುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

For All Latest Updates

TAGGED:

ABOUT THE AUTHOR

...view details