ಕರ್ನಾಟಕ

karnataka

ETV Bharat / state

ಹೋಮ್​ ಐಸೋಲೇಷನ್​ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ

ಕೋವಿಡ್​ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಹೋಮ್ ಐಸೋಲೇಷನ್‍ನಿಂದ ಹೊರ ಬರಬಹುದು. 7 ದಿನಗಳ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸುವ ಅಗತ್ಯತೆ ಇಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.

no-need-of-negative-report-after-home-isolation
ಹೋಮ್​ ಐಸೋಲೇಷನ್​ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ

By

Published : Jan 26, 2022, 5:18 AM IST

ಬೆಂಗಳೂರು:ಹೋಮ್ ಐಸೋಲೇಷನ್​​ ಬಳಿಕ ಕೆಲಸಕ್ಕೆ ಮರಳುವವರಿಗೆ ಕೋವಿಡ್​​ ನೆಗೆಟಿವ್ ರಿಪೋರ್ಟ್​ ಕಡ್ಡಾಯವಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದಾರೆ.

ಕೋವಿಡ್​ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಹೋಮ್ ಐಸೋಲೇಷನ್‍ನಿಂದ ಹೊರ ಬರಬಹುದು. 7 ದಿನಗಳ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸುವ ಅಗತ್ಯತೆ ಇಲ್ಲ. ಕಂಪನಿಗಳಲ್ಲಿ ನೆಗೆಟಿವ್ ರಿಪೋರ್ಟ್ ಕೇಳಿದರೆ, ಬಿಬಿಎಂಪಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.

ವಲಯವಾರು ಪಾಸಿಟಿವಿಟಿ ದರ ಯಥಾಸ್ಥಿತಿ:

ಬೆಂಗಳೂರಿನಲ್ಲಿ ವಲಯವಾರು ಪಾಸಿಟಿವಿಟಿ ದರವು ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಶೇ.20ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಎಲ್ಲ ವಲಯಗಳಲ್ಲೂ ದಾಖಲಾಗಿದೆ ಎಂದು ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜಧಾನಿಯಲ್ಲಿ ಮಂಗಳವಾರ 19,105 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,26,331ಕ್ಕೆ ಏರಿದೆ. 33,011 ಜನರು ಡಿಸ್ಚಾರ್ಜ್ ಆಗಿದ್ದು 13,97,344 ಗುಣಮುಖರಾಗಿದ್ದಾರೆ. 19 ಸೋಂಕಿತರು ಮೃತರಾಗಿದ್ದು, ಸದ್ಯ 2,12,460 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ಒಲಿದ ಪದ್ಮಶ್ರೀ ಗೌರವ

ABOUT THE AUTHOR

...view details