ಬೆಂಗಳೂರು : ಹೈಕೋರ್ಟ್ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ತಮ್ಮನ್ನು ಮೇಡಂ ಎಂದಷ್ಟೇ ಕರೆಯಿರಿ ಎಂದು ವಕೀಲರಿಗೆ ಮನವಿ ಮಾಡಿದ್ದಾರೆ.
'ಮೈಲಾರ್ಡ್' ಬೇಡ, 'ಮೇಡಂ' ಸಾಕು : ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಮನವಿ - ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಮನವಿ ಸುದ್ದಿ,
ಮೈ ಲಾರ್ಡ್ ಬೇಡ.. ಮೇಡಂ ಸಾಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಪೀಠ ಇಂದು (ಜೂನ್ 17ರ) ವಿಚಾರಣೆ ನಡೆಸಲಿರುವ ಪ್ರಕರಣಗಳ ಪಟ್ಟಿಯಲ್ಲಿಯೂ (ಕಾಸ್ ಲಿಸ್ಟ್) ಈ ವಿಚಾರವನ್ನು ಮೊದಲಿಗೆ ಪ್ರಸ್ತಾಪಿಸಿದ್ದಾರೆ. ಈ ಮೂಲಕ ರಾಜ್ಯ ಹೈಕೋರ್ಟ್ನಲ್ಲಿ ಮೈಲಾರ್ಡ್ ಪದ ಬೇಡ ಎಂಬ ನಿಲುವಿಗೆ ಬಂದ ಎರಡನೇ ನ್ಯಾಯಮೂರ್ತಿಯಾಗಿದ್ದಾರೆ.
ಈ ಮೊದಲು ನ್ಯಾಯಮೂರ್ತಿ ಪಂಜಿಗದ್ದೆ ಕೃಷ್ಣ ಭಟ್ ಮೈಲಾರ್ಡ್ ಬೇಡ ಎಂದಿದ್ದರು. ಕಳೆದ ಏಪ್ರಿಲ್ 17ರಂದು ಈ ವಿಚಾರ ಪ್ರಸ್ತಾಪಿಸಿದ್ದ ನ್ಯಾಯಮೂರ್ತಿಗಳು ಸದ್ಯದ ಭಾರತೀಯ ಸನ್ನಿವೇಶದಲ್ಲಿ ಮೈಲಾರ್ಡ್ ಅಥವಾ ಯುವರ್ ಲಾರ್ಡ್ ಶಿಪ್ ಎಂದು ಬಳಕೆ ಮಾಡುವುದು ಸೂಕ್ತವಲ್ಲ. 'ಸರ್' ಎಂದು ಕರೆಯುವುದು ಘನತೆ ಮತ್ತು ಗೌರವದಿಂದ ಕೂಡಿದೆ. ಅದೇ ಪದ ಬಳಕೆ ಸೂಕ್ತ ಎನಿಸುತ್ತದೆ ಎಂದು ವಕೀಲರಿಗೆ ಸಲಹೆ ನೀಡಿದ್ದರು. ನ್ಯಾಯಾಲಯದ ಕಾಸ್ ಲಿಸ್ಟ್ನಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದರು.