ಕರ್ನಾಟಕ

karnataka

By

Published : Jul 2, 2022, 1:53 PM IST

ETV Bharat / state

ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲ: ನಿಯಮ ತಿದ್ದುಪಡಿ ಮಾಡಿದ ಕೆಇಆರ್​ಸಿ!

ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲವೆಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತಿಳಿಸಿದೆ.

No more OC required for power connection, No more OC required for power connection says KERC, Karnataka Electricity Regulatory Commission news, ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲ, ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲ ಎಂದ ಕೆಇಆರ್​ಸಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸುದ್ದಿ,
ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲ

ಬೆಂಗಳೂರು: ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿದಾರರು ಸ್ವಾಧೀನ ಪತ್ರ ನೀಡುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಿದೆ.

ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ (OC) ನೀಡುವ ನಿಯಮವನ್ನು ರದ್ದುಗೊಳಿಸುವಂತೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಿಂದ ಸಾಕಷ್ಟು ಒತ್ತಾಯ ಇತ್ತು. ಇದೀಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಈ ಸಂಬಂಧ ನಿಯಮಗಳಿಗೆ ತಿದ್ದುಪಡಿ ತಂದ್ದಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ‌ಪತ್ರ ನೀಡುವ ಅಂಶವನ್ನು ರದ್ದುಗೊಳಿಸಿದೆ. ಇದೀಗ ಸ್ವಾಧೀನ ಪತ್ರ ಹೊಂದಿಲ್ಲದವರೂ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.

ಓದಿ:ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್​ಸೆಟ್ ವಿತರಿಸಲು ನಿರ್ಧಾರ: ಸಚಿವ ವಿ. ಸುನೀಲ್ ಕುಮಾರ್​

ಈ ಮುಂಚಿನ ನಿಯಮದಂತೆ ವಿದ್ಯುತ್ ಸಂಪರ್ಕ ಬೇಕಾದವರು ಎಸ್ಕಾಂಗಳಿಗೆ ಗುರುತು ಪ್ರಮಾಣಪತ್ರ, ಮಾಲಿಕತ್ವದ ಪ್ರಮಾಣಪತ್ರ ಹಾಗೂ ಸ್ವಾಧೀನ ಪತ್ರವನ್ನು ನೀಡಬೇಕಾಗಿತ್ತು. ಇದೀಗ ನಿಯಮಕ್ಕೆ ತಿದ್ದುಪಡಿ ತಂದ ಹಿನ್ನೆಲೆ ಇನ್ಮುಂದೆ ಅರ್ಜಿದಾರರು ಗುರುತು ಪ್ರಮಾಣಪತ್ರ, ಮನೆ ಮಾಲೀಕತ್ವದ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು.

ಈ ತಿದ್ದುಪಡಿ ನಿಯಮ ಗೃಹ ಹಾಗೂ ವಾಣಿಜ್ಯ ಕಟ್ಟಡದ ಅರ್ಜಿದಾರಿಗೂ ಅನ್ವಯವಾಗಲಿದೆ. ಒಸಿ ನೀಡುವ ನಿಯಮವನ್ನು ರದ್ದುಗೊಳಿಸಲು ಕೋರಿ ಎಸ್ಕಾಂಗಳು ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇತ್ತ ಸರ್ಕಾರವೂ ಒಸಿ ನಿಯಮ ತೆರವು ಮಾಡುವಂತೆ ಕೋರಿತ್ತು. ಈ ಸಂಬಂಧ ಕೆಇಆರ್​ಸಿ ಸಾರ್ವಜನಿಕ ಅಹವಾಲು ನಡೆಸಿದ ಬಳಿಕ ಇದೀಗ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಗುಡ್ ನ್ಯೂಸ್ ‌ನೀಡಿದೆ.

For All Latest Updates

TAGGED:

ABOUT THE AUTHOR

...view details