ಕರ್ನಾಟಕ

karnataka

ETV Bharat / state

ವೀಕೆಂಡ್ ಕರ್ಫ್ಯೂ ಇದ್ದರೂ ಕೆ.ಆರ್. ಪುರ ಮಾರುಕಟ್ಟೆಯಲ್ಲಿ ಜನಜಂಗುಳಿ

ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮತ್ತು ಮಾಸ್ಕ್​​ ಧರಿಸದೇ ಜನರು ಗುಂಪು ಗುಂಪಾಗಿ ಸೇರಿ ಹೂ ತರಕಾರಿ ಮತ್ತು ದಿನಸಿ ವಸ್ತುಗಳನ್ನು ಖರೀದಿ ಮಾಡುವುದರಲ್ಲಿ ನಿರತರಾಗಿದ್ದಾರೆ.

ವೀಕೆಂಡ್ ಕರ್ಫ್ಯೂ ಇದ್ದರೂ ಕೆ.ಆರ್. ಪುರ ಮಾರುಕಟ್ಟೆಯಲ್ಲಿ ಜನಜಂಗುಳಿ
ವೀಕೆಂಡ್ ಕರ್ಫ್ಯೂ ಇದ್ದರೂ ಕೆ.ಆರ್. ಪುರ ಮಾರುಕಟ್ಟೆಯಲ್ಲಿ ಜನಜಂಗುಳಿ

By

Published : Apr 24, 2021, 12:01 PM IST

ಕೆ.ಆರ್. ಪುರ:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಆದರು ಕೆ.ಆರ್. ಪುರಂ ಮಾರುಕಟ್ಟೆಯಲ್ಲಿ ಜನರು ದಿನ ಬಳಕೆ ವಸ್ತುಗಳನ್ನು ಖರೀದಿಸಲು ಮುಗಿ ಬಿದ್ದಿದ್ದಾರೆ.

ವೀಕೆಂಡ್ ಕರ್ಫ್ಯೂ ಇದ್ದರೂ ಕೆ.ಆರ್. ಪುರ ಮಾರುಕಟ್ಟೆಯಲ್ಲಿ ಜನಜಂಗುಳಿ

ಗ್ರಾಹಕರು ಮಾಸ್ಕ್​​ ಧರಿಸಿಕೊಂಡು ಬಂದರು ವ್ಯಾಪಾರಸ್ಥರು ಮಾತ್ರ ಮಾಸ್ಕ್​ ಧರಿಸದೇ ವ್ಯಾಪಾರ ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಪೊಲೀಸರು ಕೆಆರ್ ಪುರಂ ಮಾರುಕಟ್ಟೆಗೆ ವ್ಯಾಪಾರ ಮಾಡಲು ಬೆಳಗ್ಗೆ 3 ಗಂಟೆಯಿಂದ 10 ಗಂಟೆಯವರೆಗೆ ಅನುಮತಿ ನೀಡಿದ್ದಾರೆ. ಅನುಮತಿಯಲ್ಲಿ ಸಾಮಾಜಿಕ ಅಂತರ ಹಾಗೂ ಪ್ರತಿಯೊಬ್ಬರೂ ಮಾಸ್ಕ್​ ಧರಿಸಬೇಕು ಎಂದು ತಿಳಿಸಲಾಗಿದೆ. ಆದರೆ, ವ್ಯಾಪಾರಸ್ಥರು ಮಾತ್ರ ಇದಕ್ಕೆ ಕ್ಯಾರೆ ಎನ್ನದೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ಕೆಲವು ಅಂಗಡಿ - ಮುಂಗಟ್ಟುಗಳು ಸ್ವಯಂಪ್ರೇರಿತರಾಗಿ ಬಾಗಿಲು ಬಂದ್​ ಮಾಡಿ ವೀಕೆಂಡ್ ಕರ್ಫ್ಯೂ ಗೆ ಬೆಂಬಲವನ್ನು ಸೂಚಿಸಿದ್ದಾರೆ. ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳವಾಗಿದ್ದು, ಆಟೋ ಟ್ಯಾಕ್ಸಿಗೆ ಪ್ರಯಾಣಿಕರು ಇಲ್ಲದೆ ಕಾಯುತ್ತಿದ್ದಾರೆ. ದೂರದ ಪ್ರಯಾಣಕ್ಕೆ ಬಿಎಂಟಿಸಿ, ಕೆಎಸ್​​ಆರ್​ಟಿಸಿ ಬಸ್​​ನ ಅವಕಾಶ ಕಲ್ಪಿಸಲಾಗಿದೆ.

ಓದಿ : ಬೆಂಗಳೂರಲ್ಲಿ ಸೀಮಿತ ಅವಧಿಗೆ ಮಾತ್ರ ಅಂಗಡಿಗಳು ಓಪನ್ : ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ABOUT THE AUTHOR

...view details