ಕರ್ನಾಟಕ

karnataka

ETV Bharat / state

ಅಗತ್ಯ ವಸ್ತುಗಳಿಗೆ ಸರ್ಕಾರ ಅನುಮತಿ ನೀಡಿರುವುದೇ ತಪ್ಪಾಯ್ತಾ? - ಅಗತ್ಯ ವಸ್ತುಗಳಿಗೆ ಅನುಮತಿ

ಆನಂದಪುರ ವಾರ್ಡ್​ನಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ. ಪೊಲೀಸರ ಮಾತಿಗೂ ಕ್ಯಾರೆ ಅನ್ನದೇ ವ್ಯಾಪಾರ ವಹಿವಾಟಿನಲ್ಲಿ ಜನರು ಮಗ್ನರಾಗಿದ್ದಾರೆ. ಮಾಮೂಲಿ ದಿನಗಳಲ್ಲಿ ಕೆ ಆರ್ ಮಾರುಕಟ್ಟೆ ಹೇಗೆ ಇರುತ್ತೊ ಅದೇ ರೀತಿ ವ್ಯಾಪಾರ ನಡೆಯುತ್ತಿದೆ.

lockdown
lockdown

By

Published : Jul 18, 2020, 11:47 AM IST

ಬೆಂಗಳೂರು:ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೊರೊನಾ ಏರಿಕೆ ಆಗುತ್ತಿರುವ ಕಾರಣ ಒಂದು ವಾರ ಲಾಕ್​ಡೌನ್​ಗೆ ಸರ್ಕಾರ ಕರೆ ನೀಡಿದೆ.‌ ಆದರೆ, ಅಗತ್ಯ ವಸ್ತುಗಳಿಗೆ ಸರ್ಕಾರ ಕೊಟ್ಟ ಅನುಮತಿಯೇ ತಪ್ಪಾಯ್ತಾ ಅನ್ನುವ ಪ್ರಶ್ನೆ ಕಾಡುತ್ತಿದೆ.

ಏಕೆಂದರೆ, ಆನಂದಪುರ ವಾರ್ಡ್​ನಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ. ಪೊಲೀಸರ ಮಾತಿಗೂ ಕ್ಯಾರೇ ಅನ್ನದೇ ವ್ಯಾಪಾರ ವಹಿವಾಟಿನಲ್ಲಿ ಜನರು ಮಗ್ನರಾಗಿದ್ದಾರೆ.

ಅಗತ್ಯ ವಸ್ತುಗಳಿಗೆ ಅನುಮತಿ

ಸಾಮಾಜಿಕ ಅಂತರ ಪಾಲಿಸದ ಜನರಿಗೆ, ಹೇಳವುವರು ಕೇಳುವವರು ಇಲ್ಲದಂತಾಗಿದೆ. ಮಾಮೂಲಿ ದಿನಗಳಲ್ಲಿ ಕೆ ಆರ್ ಮಾರುಕಟ್ಟೆ ಹೇಗೆ ಇರುತ್ತೊ ಅದೇ ರೀತಿ ವ್ಯಾಪಾರ ನಡೆಯುತ್ತಿದೆ. ಕೆಲವರು ಫೇಸ್ ಮಾಸ್ಕ್ ಹಾಕದೇ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳದೇ ಇರುವುದು ಕಂಡು ಬಂದಿದೆ. ಈ ದೃಶ್ಯಗಳನ್ನ ನೋಡಿದರೆ ಕೊರೊನಾ ಲಾಕ್​ಡೌನ್​ ಕೇವಲ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.

ABOUT THE AUTHOR

...view details