ಕರ್ನಾಟಕ

karnataka

ETV Bharat / state

ಸಹ್ಯಾದ್ರಿ ಗಿರಿಜನ ಲ್ಯಾಂಪ್ಸ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿಲ್ಲ: ಸಚಿವ ಎಸ್.ಟಿ ಸೋಮಶೇಖರ್ - no irregularities of Sahyadri Tribal Lamps Society

ಸಹ್ಯಾದ್ರಿ ಗಿರಿಜನ ಲ್ಯಾಂಪ್ಸ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದಸ್ಯ ಘೋಟ್ನೆಕರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ.ಸೋಮಶೇಖರ್, 2020-21ನೇ ಸಾಲಿನಲ್ಲಿ ಲ್ಯಾಂಪ್ಸ್ ಸಹಕಾರ ಸಂಘಗಳ ಮಾರುಕಟ್ಟೆ ಮೂಲಭೂತ ಸೌಕರ್ಯ ಸ್ಥಾಪನೆ ಯೋಜನೆಯಡಿ 12.5 ಲಕ್ಷ ಬಿಡುಗಡೆ ಮಾಡಿದ್ದು, ಅದರಲ್ಲಿ 2 ಲಕ್ಷ ಹಣ ಜೇನು ಖರೀದಿಗೆ ಬಳಕೆ ಮಾಡಿಕೊಳ್ಳಲಾಗಿತ್ತು. ನಂತರ ಉದ್ದೇಶಿತ ಯೋಜನೆಗೆ ಬಿಟ್ಟು ಬೇರೆ ಕಾರಣಕ್ಕೆ ಹಣ ಬಳಸಿಕೊಳ್ಳುವಂತಿಲ್ಲ ಎಂದು ನೋಟಿಸ್ ನೀಡಿ ಹಣವನ್ನು ಮರಳಿ ಜಮೆ ಮಾಡಿಸಿಕೊಳ್ಳಲಾಗಿದೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.

ST Somashekhar
ಎಸ್.ಟಿ ಸೋಮಶೇಖರ್

By

Published : Feb 2, 2021, 5:08 PM IST

ಬೆಂಗಳೂರು: ಕಾರವಾರ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬುಡಕಟ್ಟು ಜನಾಂಗದ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಾರಂಭವಾದ ಸಹ್ಯಾದ್ರಿ ಗಿರಿಜನ ಲ್ಯಾಂಪ್ಸ್ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದ ವೇಳೆ ಸಹ್ಯಾದ್ರಿ ಗಿರಿಜನ ಲ್ಯಾಂಪ್ಸ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದಸ್ಯ ಘೋಟ್ನೆಕರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020-21ನೇ ಸಾಲಿನಲ್ಲಿ ಲ್ಯಾಂಪ್ಸ್ ಸಹಕಾರ ಸಂಘಗಳ ಮಾರುಕಟ್ಟೆ ಮೂಲಭೂತ ಸೌಕರ್ಯ ಸ್ಥಾಪನೆ ಯೋಜನೆಯಡಿ 12.5 ಲಕ್ಷ ಬಿಡುಗಡೆ ಮಾಡಿದ್ದು, ಅದರಲ್ಲಿ 2 ಲಕ್ಷ ಹಣ ಜೇನು ಖರೀದಿಗೆ ಬಳಕೆ ಮಾಡಿಕೊಳ್ಳಲಾಗಿತ್ತು. ನಂತರ ಉದ್ದೇಶಿತ ಯೋಜನೆಗೆ ಬಿಟ್ಟು ಬೇರೆ ಕಾರಣಕ್ಕೆ ಹಣ ಬಳಸಿಕೊಳ್ಳುವಂತಿಲ್ಲ ಎಂದು ನೋಟಿಸ್ ನೀಡಿ ಹಣವನ್ನು ಮರಳಿ ಜಮೆ ಮಾಡಿಸಿಕೊಳ್ಳಲಾಗಿದೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.

ವಾರ್ಷಿಕ ಸಮಾನ್ಯ ಸಭೆ ನಡೆಸಿಲ್ಲ ಎಂದು ಸದಸ್ಯ ಶಾಂತಾರಾಮ್‌ ಸಿದ್ದಿ ಕೇಳಿದ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನರಲ್ ಬಾಡಿ ಸಭೆ ಮಾಡಿಲ್ಲ ಎಂದರೆ ಸೂಪರ್ ಸೀಡ್ ಮಾಡುವ ಅಧಿಕಾರ ಇದೆ. ಕೊರೊನಾ ಕಾರಣಕ್ಕೆ ಕಳೆದ ಬಾರಿ ವಿನಾಯಿತಿ ನೀಡಲಾಗಿತ್ತು. ಆದರೆ ಸತತವಾಗಿ ವಾರ್ಷಿಕ ಮಹಾಸಭೆ ಮಾಡಿಲ್ಲ ಎಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಕಟ್ಟಡ ಸರಿಯಿಲ್ಲ ಎಂದರೆ ತನಿಖೆ ನಡೆಸಲಾಗುತ್ತದೆ ಎಂದರು.

ಫೆ. 6ರಂದು ಬೆಳೆಗಾರರ ಸಭೆ:

ಫೆ. 6ರಂದು ಕಾಫಿ ಬೆಳೆಗಾರರು ಸೇರಿದಂತೆ ರಾಜ್ಯ ವ್ಯಾಪಿ ಎಲ್ಲಾ ಬೆಳೆಗಾರರ ಸಭೆ ಕರೆಸಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಹಾಗೂ ಬಜೆಟ್​​ನಲ್ಲಿ ಯಾವ ರೀತಿ ನೆರವು ಒದಗಿಸಬಹುದು ಎನ್ನುವ ಕುರಿತು ಚರ್ಚೆ ನಡೆಸುವುದಾಗಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ್ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಬೆಳಗಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಫಿ ಮಾತ್ರವಲ್ಲ ಎಲ್ಲಾ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿದ್ದಾರೆ. ವಿಶೇಷವಾಗಿ ಕಾಫಿ ಬೆಳೆಗಾರರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಫೆ. 6ರಂದು ರಾಜ್ಯ ವ್ಯಾಪಿ ಬೆಳೆಗಾರರನ್ನು ಕರೆಸಿ, ಈ ಬಜೆಟ್​​ನಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ. ನಾನು ಕೂಡ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಸಲಹೆಗಳನ್ನು ಬಜೆಟ್​​ನಲ್ಲಿ ಸೇರಿಸಿಕೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸೊಸೈಟಿಗಳು ತಾರತಮ್ಯ ಅನುಸರಿಸಿದ ಬಗ್ಗೆ ಲಿಖಿತ ದೂರು ಬಂದರೆ ತನಿಖೆ:

ರಾಜ್ಯ ಸರ್ಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಂಘದ ಸದಸ್ಯರಿಗೆ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸದಸ್ಯ ಗೋಪಾಲಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ದುಡಿಯುವ ಬಂಡವಾಳ ಉದ್ದೇಶಕ್ಕಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ವಿತರಿಸುವ ಯೋಜನೆ ಜಾರಿಯಲ್ಲಿದೆ. ಆದರೆ ಸೊಸೈಟಿಗಳು ಸಾಲ ನೀಡಿಕೆಯಲ್ಲಿ‌ ತಾರತಮ್ಯ ಅನುಸರಿಸುವಂತಿಲ್ಲ. ಒಂದು ವೇಳೆ ತಾರತಮ್ಯ ಅನುಸರಿಸಿದ್ದಲ್ಲಿ, ಲಿಖಿತ ದೂರು ಕೊಟ್ಟರೆ ತನಿಖೆಗೆ ಆದೇಶ ಮಾಡಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ಸೊಸೈಟಿ ಮೇಲೆ ಆರೋಪ ಇದೆ ಎಂದು ಮಾಹಿತಿ ಕೊಟ್ಟರೆ, ತನಿಖೆಗೆ ಆದೇಶ ನೀಡಲಾಗುತ್ತದೆ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಿ.ಎಂ.ಇಬ್ರಾಹಿಂ, ಅಮಾನತ್ ಬ್ಯಾಂಕ್ ಅವ್ಯವಹಾರ ಪ್ರಕರಣದ ತನಿಖೆ ನಿಲ್ಲಿಸಲಾಗಿದೆಯಲ್ಲಾ ಎಂದು ಪ್ರಸ್ತಾಪ ಮಾಡಿದರು. ಇರೋ ತನಿಖೆಯನ್ನೇ ನಿಲ್ಲಿಸಿದ್ದೀರಿ. ಇನ್ನೇನು ಹೊಸ ತನಿಖೆ ಮಾಡಿಸುತ್ತೀರಿ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಅದು ಬೇರೆ, ಇದು ಬೇರೆ ಎಂದು ಸಮಾಜಾಯಿಷಿ ನೀಡಿದರು.

ABOUT THE AUTHOR

...view details