ಕರ್ನಾಟಕ

karnataka

ETV Bharat / state

ನೈಟ್ ಕರ್ಫ್ಯೂ ಹೇರುವ ಯಾವುದೇ ಯೋಚನೆ ಇಲ್ಲ : ಸಿಎಂ ಯಡಿಯೂರಪ್ಪ

ಸುತ್ತೂರು ಮಠದ ಕಿರಿಯ ಶ್ರೀಗಳು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು, ಈ ಹಿನ್ನೆಲೆಯನ್ನು ಬನಶಂಕರಿಯಲಿರುವ ಸುತ್ತೂರು ಶ್ರೀಗಳ ನಿವಾಸ ಸುತ್ತೂರು ಸದನದಲ್ಲಿ ಬಿಎಸ್​​ವೈ ಅವರು ಶ್ರೀಗಳನ್ನು ಭೇಟಿಯಾದರು. ಹಿರಿಯ ಮತ್ತು ಕಿರಿಯ ಶ್ರೀಗಳನ್ನು ಸಿಎಂ ಖುದ್ದು ಭೇಟಿ ಮಾಡಿ ಆಶೀರ್ವಾದ ಪಡೆದು, ಕೆಲಕಾಲ ಮಾತುಕತೆ ನಡೆಸಿದರು.

ಸಿಎಂ ಬಿ.ಎಸ್​.ಯಡಿಯೂರಪ್ಪ
CM yadiyurappa

By

Published : Dec 4, 2020, 12:17 PM IST

Updated : Dec 4, 2020, 12:33 PM IST

ಬೆಂಗಳೂರು :ರಾಜ್ಯದಲ್ಲಿ ನೈಟ್ ಕರ್ಫ್ಯೂ ಹೇರುವ ಬಗ್ಗೆ ಯಾವುದೇ ಯೋಚನೆ ಇಲ್ಲವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ನಗರದ ಬನಶಂಕರಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಆರಂಭವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಆ ಬಗ್ಗೆ ಯಾವುದೇ ಯೋಚನೆ ಇಲ್ಲ.

ಇಂದು ಮಧ್ಯಾಹ್ನ ಬೆಳಗಾವಿಗೆ ಹೋಗುತ್ತಿದ್ದೇನೆ. ನಾಳೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಇದೆ. ಅದನ್ನು ಮುಗಿಸಿ ನಾಳೆ ಸಂಜೆ ವಾಪಸ್​ ಬಂಬ ಬಳಿಕ ಉಳಿದ ವಿಷಯಗಳ ಬಗ್ಗೆ ತಿಳಿಸುತ್ತೇನೆ ಎಂದರು.

ಸುತ್ತೂರು ಶ್ರೀಗಳ ಭೇಟಿ:

ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಸಿಎಂ

ಸುತ್ತೂರು ಮಠದ ಕಿರಿಯ ಶ್ರೀಗಳು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು, ಈ ಹಿನ್ನೆಲೆಯನ್ನು ಬನಶಂಕರಿಯಲಿರುವ ಸುತ್ತೂರು ಶ್ರೀಗಳ ನಿವಾಸ ಸುತ್ತೂರು ಸದನದಲ್ಲಿ ಬಿಎಸ್​​ವೈ ಅವರು ಶ್ರೀಗಳನ್ನು ಭೇಟಿಯಾದರು. ಹಿರಿಯ ಮತ್ತು ಕಿರಿಯ ಶ್ರೀಗಳನ್ನು ಸಿಎಂ ಖುದ್ದು ಭೇಟಿ ಮಾಡಿ ಆಶೀರ್ವಾದ ಪಡೆದು, ಕೆಲಕಾಲ ಮಾತುಕತೆ ನಡೆಸಿದರು.

Last Updated : Dec 4, 2020, 12:33 PM IST

ABOUT THE AUTHOR

...view details