ಬೆಂಗಳೂರು: ಗ್ರಹಣ ಸಂಬಂಧ ವಿಧಾನಸೌಧದಲ್ಲಿ ಪೂಜೆ, ಹೋಮ ಹವನ ಮಾಡಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗ್ರಹಣ ಸಂಬಂಧ ಹೋಮ - ಹವನ ಮಾಡಿಲ್ಲ,ಮೂಢ ನಂಬಿಕೆ ಒಳ್ಳೆದಲ್ಲ: ಸಚಿವ ಆರ್.ಅಶೋಕ್
ವಿಜ್ಞಾನಿಗಳು ಆಚರಣೆಯನ್ನು ವೈಜ್ಞಾನಿಕವಾಗಿ ಮಾಡುವ ಬಗ್ಗೆ ತಿಳಿವಳಿಕೆ ಕೊಟ್ಟಿದ್ದಾರೆ. ನಮ್ಮ ಪೂರ್ವಜರೂ ಇದಕ್ಕೆ ವೈಜ್ಞಾನಿಕವಾಗಿ ವಿವರಣೆ ನೀಡಿದ್ದಾರೆ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದರು.
ಗ್ರಹಣ ಸಂಬಂಧ ಹೋಮ-ಹವನ ಮಾಡಿಲ್ಲ,ಮೂಡ ನಂಬಿಕೆ ಒಳ್ಳೆದಲ್ಲ:ಸಚಿವ ಆರ್.ಅಶೋಕ್
ದಿನನಿತ್ಯದ ಪೂಜೆ ಏನಿತ್ತು ಅದನ್ನು ಮಾಡುತ್ತೇವೆ. ನಾನು ಹಿಂದೂ. ನಮ್ಮ ಮನೆ ದೇವರು ಆಂಜನೇಯ. ಆಂಜನೇಯ ಹಾಗೂ ಕೆಂಪೇಗೌಡರಿಗೆ ಪೂಜೆ ಮಾಡಿ ನನ್ನ ದಿನನಿತ್ಯದ ಕಾಯಕವನ್ನು ಶುರು ಮಾಡುತ್ತೇನೆ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ.